“ಸ್ನೇಹ ಮತ್ತು ನಮ್ರತೆಯಿಂದ ಸೇವೆ ಮಾಡಿ”

मैत्रीं भजत अखिलहृज्जेत्रीम्

Maithreem Bhajatha Akila Hrujjethreem

“ಮಿತ್ರತೆ ಮತ್ತು ನಮ್ರತೆಯಿಂದ ಸೇವೆ ಸಲ್ಲಿಸಿ, ಎಲ್ಲರ ಹೃದಯವನ್ನು ಗೆಲ್ಲಿರಿ”

“ಮಿತ್ರ” ಎಂಬುವ ಹೆಸರು ಮತ್ತು ವಿಷಯದ ಆಧಾರ, ಕಂಚಿ ಕಾಮಕೋಟಿ ಮಠದ ಚಂದ್ರಶೇಕರೆಂದ್ರ ಸ್ವಾಮಿಗಳ ಲಿಖಿತ “ಮೈಥ್ರೀಮ್ ಭಜತ” ಎಂಬ ಕೃತಿ. ಇದರ ಮೊದಲ ಪಂಕ್ತಿಯೇ ಮಿತ್ರ ಕ್ಯಾನ್ಕೇರ್ ಫೌಂಡೇಶನ್ ನ ಶಾಶ್ವತ ಸ್ಪೂರ್ತಿ.

(ದೂರ)ದೃಷ್ಟಿ

ಕ್ಯಾನ್ಸರ್ ಬಗ್ಗೆ ಸೂಕ್ತ ಮಾಹಿತಿ, ಅದರ ತಡೆಗಟ್ಟುವಿಕೆ, ಮತ್ತು ವೈದ್ಯಕೀಯಕ್ಕೆ ಪೂರಕವಾದ ವಿವಿಧ ಸೇವೆಗಳು ಮತ್ತು ತಿಳುವಳಿಕೆ, ಇವೆಲ್ಲಕ್ಕೂ ಮಿತ್ರ ಕ್ಯಾನ್ಕೇರ್ಫೌಂ ಡೇಶನ್ ಜನರ ಮೊದಲ ಮೂಲ ಆಯ್ಕೆ.

ಗುರಿ

  • ಅರಿವನ್ನು ತರುವ ವಿವಿಧ ಕಾರ್ಯಕ್ರಮಗಳನ್ನು ನಡೆಸಿ, ಕ್ಯಾನ್ಸರ್ ತಡೆಗಟ್ಟಿ, ಜೀವಗಳನ್ನು ಉಳಿಸುವುದು.
  •  ಜನಕೇಂದ್ರಿತ ಸೇವೆಗಳನ್ನು ಒಗ್ಗೂಡಿಸಿ, ಕ್ಯಾನ್ಸರ್ ಪೀಡಿತರಿಗೆ ಗುಣಮುಖರಾಗಿ ಬಾಳಲು ದಾರಿ ಮತ್ತು ನೆರವು – ಇವೆಲ್ಲವನ್ನೂ ಆವಿಷ್ಕಾರ, ತಂತ್ರಜ್ಞಾನ ಮತ್ತು ಉಪಯೋಗಿಸಲು ಸುಲಭ ರೀತಿಯಲ್ಲಿ ಪೂರೈಸುವುದು

ಮೂಲ ಮೌಲ್ಯಗಳು

  • ಕರುಣಾಮಯಿ ರಕ್ಷಣೆ
  • ವೃತ್ತಿಪರ ಸೇವೆ
  • ಮಾನವೀಯತೆ ಮತ್ತು ಸಹಾನುಭೂತಿ
  • ಎಲ್ಲರಿಗೂ ಜ್ಞಾನ
  • ಸೇವೆಗಾಗಿ ಬೆಳತೆ

“ತೆರೆದ ಹಸ್ತಗಳು” ಸಹಾಯ ಮತ್ತು ಸೇವೆ – ಕ್ಯಾನ್ಸರಿನಿಂದ ಗುಣಮುಖರಾಗಿ ಬಾಳಲು ಬೇಕಾಗುವ ಸಹಾಯ ಮತ್ತು ಸೇವೆಗಳೆನ್ನರಡನ್ನೂ ಸೂಚಿಸುತ್ತದೆ.

ನೇರಳೆ ಬಣ್ಣ – ನಮ್ಮ ದಾಖಲೆಗಳಲ್ಲಿ ಬಳಸಿರುವ ಬಣ್ಣ, ಶುದ್ದತೆ, ಭಕ್ತಿ ಮತ್ಹು ರಕ್ಷಣೆಯ ಪ್ರತೀಕವಾಗಿದೆ.

ಅಡಿಬರಹ – “ಜೀವಗಳ ಬದಲಾವಣೆ, ಒಟ್ಟಿಗೆ…” – ನಮ್ಮ ದೂರದೃಷ್ಟಿ ಮತ್ತು ಗುರಿಯನ್ನು ಸೆರೆಹಿಡಿದಿದೆ. ಈ ನಮ್ಮ ಭರವಸೆಗಳನ್ನು ನಾವು ನಿಯಮಿತ ಸೇವೆಗಳು, ತಂತ್ರಜ್ಞಾನದ ಬಳಕೆ ಮತ್ತು ಸಹಾಯಕ ಬಳಗದವರಿಂದ ಪೂರೈಸುತ್ತೇವೆ.

ಕಾರ್ಯಾಚರಣೆ

ಕ್ಯಾನ್ಸರ್ ತಡೆಗಟ್ಟುವಿಕೆ ಬಗ್ಗೆ ಸೂಕ್ತ ಮಾಹಿತಿ, ಮತ್ತು ವೈದ್ಯಕೀಯಕ್ಕೆ ಪೂರಕವಾದ ವಿವಿಧ ಸೇವೆಗಳು ಮತ್ತು ತಿಳುವಳಿಕೆ, ಇವೆಲ್ಲಕ್ಕೂ ಮಿತ್ರ ಕ್ಯಾನ್ಕೇರ್ ಫೌಂಡೇಶನ್ ಜನರ ಮೊದಲ ಮೂಲ ಆಯ್ಕೆ.

ಮಿತ್ರ ಕ್ಯಾನ್ಕೇರ್ ಫೌಂಡೇಶನ್, ಇದು ಒಂದು ಲಾಭವನ್ನು ಅಪೇಕ್ಷಿಸದ ಖಾಸಗಿ ಸೇವಾ ಸಂಸ್ಥೆ. ಇದರ ಉದ್ದೇಶ ವೈದ್ಯಕೀಯೇತರ ಹಲವಾರು ಮುಖ್ಯ ಪೂರಕವಾದ ಸೇವೆಗಳನ್ನು ಒದಗಿಸುವುದು. ಉದಾ:

  • ಸಮಾಜದಲ್ಲಿ ಕ್ಯಾನ್ಸರ್ ಸಮಸ್ಯೆಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವುದು.
  • ಯಾನ್ಸರ್ ನಿರ್ವಹಣೆಗೆ ಮೊದಲಿನಿಂದ ಎಲ್ಲಾ ಹಂತಗಳಲ್ಲಿ ಸೇವೆಗಳನ್ನು ಒದಗಿಸುವುದು.
  • ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗೆ ಧನ ಸಂಗ್ರಹ ಮಾಡುವುದು.

ವಿಸ್ತಾರವಾದ ತಂಡ / ಸೇವೆಯಲ್ಲಿ ಸಹಯೋಗಿಗಳು

ನಿರೀಕ್ಷಿಸಿ…

ನಮ್ಮ ಬ್ರಾಂಡ್ ಗುರುತು

ಕ್ಯಾನ್ಸರ್ ವೈದ್ಯಕೀಯಕ್ಕೆ ಪೂರಕವಾದ, ಆವಿಷ್ಕಾರದಿಂದ ಕೂಡಿದ, ಜನಕೆಂದ್ರಿತ, ತಂತ್ರಜ್ಞಾನ ಚಲಿತ, ಸುಲಭೋಪಯೋಗಿ ಸೇವೆಗಳಿಂದ, ಪೀಡಿತರು ಗುಣಮುಖರಾಗಿ, ಪುನಃ ಸಂಪೂರ್ಣ ಜೀವನ ನಡೆಸಲು ಸಹಾಯ ನೀಡುವ ಸಂಸ್ಥೆ ಎಂದು ಮಿತ್ರ ಕ್ಯಾನ್ಕೇರ್ ಫೌಂಡೇಶನ್ ಹೆಸರುವಾಸಿಯಾಗಲಿ.

ಈ ತರಹದ ಮೊದಲನೆಯ ಸಂಸ್ಥೆ