ಕ್ಯಾನ್ಸರ್ ಮತ್ತು ಸಾಮಾನ್ಯ ಮನುಷ್ಯ – ವರದಿ

ಕ್ಯಾನ್ಸರ್

ಮತ್ತು

ಸಾಮಾನ್ಯ ಮನುಷ್ಯ

ಶನಿವಾರ, ಜುಲೈ ೧೬, ೨೦೨೩, ೧೧.೦೦ ರಿಂದ ೧೨.೧೫

Dr. ಆರ್. ಪಿ. ದೇವ್

ಹಿರಿಯ ಕನ್ಸಲ್ಟೆಂಟ್ -ಕ್ಯಾನ್ಸರ್ ಸರ್ಜನ್ ( ತಲೆ ಮತ್ತು ಕತ್ತು), ತಲೆ ಮತ್ತು ಕತ್ತು ಕ್ಯಾನ್ಸರ್ ಚಿಕಿತ್ಸಾಲಯ, ಡಾಕ್ಟರ್ ರುದ್ರಪ್ಪ ಈ. ಎನ್. ಟಿ. ಆಸ್ಪತ್ರೆ, ಬೆಂಗಳೂರು

ಮಿತ್ರ ಕ್ಯಾನಕೇರ್ ಫೌಂಡೇಶನ್ ಸಂಸ್ಥೆ   ಮತ್ತೊಂದು ವಿಚಾರ ಪ್ರೇರಣೆಯ ಮತ್ತು ಮಾಹಿತಿ ಹಂಚಿಕೊಳ್ಳುವ ವೇಬಿನರ್ ಕಾರ್ಯಕ್ರಮ,  Dr. ಆರ್. ಪಿ. ದೇವ್, ವೈದ್ಯಕೀಯ ಸಲಹಾ ಸಮಿತಿ ( ಮೆಡಿಕಲ್ ಅಡ್ವೈಸರಿ ಕೌನ್ಸಿಲ್) ಸದಸ್ಯರಿಂದ ಆಯೋಜಿಸಿತ್ತು. Dr. ಆರ್. ಪಿ. ದೇವ್ ಅವರು ನೇತೃತ್ವ ನೀಡಿ, ಕ್ಯಾನ್ಸರ್ ತಡೆಗಟ್ಟುವಿಕೆ, ಅದರಲ್ಲೂ ಭಾರತದಲ್ಲಿ ಪ್ರಚಲಿತವಾದ ತಂಬಾಕು ಸೇವನೆಯಿಂದಾಗುವ ಕ್ಯಾನ್ಸರ್ ಬಗ್ಗೆ ,  ನಿರಂತರವಾಗಿ ಶ್ರಮಿಸಿದ್ದಾರೆ. ಈ ವೇಬಿನಾರ್ ಕಾರ್ಯಕ್ರಮದಲ್ಲಿ ಬಹುತೇಕ ಮಂದಿ ಹಾಜರಿದ್ದು ಬಹಳ ಪ್ರಶ್ನೆಗಳನ್ನು ಕೇಳಿದರು.

ಕಾರ್ಯಕ್ರಮದ  ನಿರ್ವಹಣೆಯನ್ನು ಮಿತ್ರ ಕ್ಯಾನಕೇರ್ ಫೌಂಡೇಶನ್ ಸಂಸ್ಥೆಯ  ಜಂಟಿ ಸ್ಥಾಪಕರಾದ  ಅಮರ್ ಭಾಸ್ಕರ್ ಮಾಡಿದರು.

ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಪಡೆದು ಮುಕ್ತಾಯಗೊಂಡಿತು. ಭಾಗವಹಿಸಿದವರ ಪೈಕಿ, ಬಬ್ಲಿ ಧಾಲಿವಾಲ್, ಕಾರ್ಯಕ್ರಮವನ್ನು ಪ್ರಶಂಸಿಸಿ, ಮಿತ್ರ ಕ್ಯಾನಕೇರ್ ಫೌಂಡೇಶನ್ ಸಂಸ್ಥೆಯ  ಕ್ಯಾನ್ಸರ್ ಅರಿವು ಕಾರ್ಯಕ್ರಮಗಳ  ಬಗ್ಗೆ pಮೆಚ್ಚುಗೆ ವ್ಯಕ್ತ ಪಡಿಸಿದರು.

ತಿಳುವಳಿಕೆಗಳ ಸಾರಾಂಶ

ಕ್ಯಾನ್ಸರ್ ಮತ್ತು ಸಾಮಾನ್ಯ ಮನುಷ್ಯ

ಒಂದೇ  ಗೊತ್ತಿರುವುದೇನಂದರೆ – ನಮಗೆ ಗೊತ್ತಿಲ್ಲ

Dr. ಆರ್. ಪಿ. ದೇವ್

ಮಿತ್ರ ಕ್ಯಾನಕೇರ್ ಫೌಂಡೇಶನ್ ಸಂಸ್ಥೆಯ  ಜಂಟಿ ಸ್ಥಾಪಕರಾದ  ಅಮರ್ ಭಾಸ್ಕರ್  ಆವರು ನೀಡಿದ   Dr.ದೇವ್ ಅವರ ಭಾವನಾತ್ಮಕ ಪರಿಚಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು.

Dr. ದೇವ್  ಮಿತ್ರ ಕ್ಯಾನಕೇರ್ ಸಂಸ್ಥೆಯ, ತಂತ್ರಜ್ಞಾನ ಅಳವಡಿಸಿದ,  ಕ್ಯಾನ್ಸರ್ ನಂತರ ಜೀವನ ನಿರ್ವಹಣೆಯ  ಬೆಂಬಲ ನೀಡುವ ಸೇವೆಗಳನ್ನು ಮೆಚ್ಚಿಸಿದರು. 

ಒಂದೇ  ಗೊತ್ತಿರುವುದೇನಂದರೆ ” ನಮಗೆ ಗೊತ್ತಿಲ್ಲ” ಎಂಬ ಹೇಳಿಕೆಯಿಂದ ಅವರ ಭಾಷಣ ಪ್ರಾರಂಭಿಸ Dr ದೇವ್, ಹಲವಾರು ಬಾರಿ ಇದನ್ನು ಉಲ್ಲೇಖಿಸಿದರು.  ಇದು ನಮ್ಮ ಇಂದಿನ ಕ್ಯಾನ್ಸರ್ ಬಗ್ಗೆ ಇರುವ ತಿಳುವಳಿಕೆ   ಮತ್ತು ಅದರ ನಿವಾರಣೆ (ಟ್ರೀಟ್ಮೆಂಟ ) ಎಂದು ಅವರ ಅಭಿಪ್ರಾಯ. ಆದರೇ  ಇದು ಕ್ಯಾನ್ಸರ್ ಬಗ್ಗೆ ಜ್ಞಾನ ಮತ್ತು ಪರಿಹಾರಗಳ ಶೋಧನೆಯ ಶ್ರಮವೂ ಹೌದು.

ಕ್ಯಾನ್ಸರ್ ಸುತ್ತ ಮುತ್ತ ಪುರಾಣಗಳು

ಅಧಿವೇಶನದ ಮೊದಲಿನಲ್ಲಿ  ಕ್ಯಾನ್ಸರ್ ಸುತ್ತ ಮುತ್ತ ಇರುವ ಪುರಾಣಗಳನ್ನು ಒಡೆದು, ಕ್ಯಾನ್ಸರ್ ಡಯಾಬಿಟೀಸ್ ತರಹ ಖಾಯಿಲೆ ಮತ್ತು ಅದನ್ನು ನಿವಾರಿಸಬಹುದು ಎಂದರು. ಅವರು ಕ್ಯಾನ್ಸರ್ ಅನ್ನು ಆತಂಕ ವಾದಿಗಳಿಗೆ  ಆಸಕ್ತಿದಾಯಕ ಹೋಲಿಕೆ ಮಾಡಿ, ನಮಗಿರುವ ಪೂರ್ಣ ಶಕ್ತಿಯನ್ನು ಕೂಡಿಸಿಕೊಂಡು ಈ ಖಾಯಿಲೆಯನ್ನು ಎದುರಿಸಬೇಕೆಂದರು.  Dr ದೇವ್ ಮಂಡಿಸಿದ ಸತ್ಯಸಂಗತಿಗಳು ಹೀಗಿವೆ,

  • ಕ್ಯಾನ್ಸರ್ ಮತ್ತೊಂದು  ಅಸಾಂಕ್ರಾಮಿಕ ಖಾಯಿಲೆ
  • ಅದು  ವೈದ್ಯಕೀಯ ಮೂರನೆಯ ದೊಡ್ಡ ಮಾರಕ ವ್ಯಾಧಿ
  • ಅದು ಪ್ರಾಚೀನ ಖಾಯಿಲೆ ಯಾಗಿದ್ದು , ಜವಾಬ್ದಾರಿಯಿಂದ ನಿರ್ವಹಿಸಿ ಗುಣಮುಖ ಮಾಡಬಹುದು.

ಇದು  ಮರಣಕ್ಕೆ ೮ನೇ ದೊಡ್ಡ ಕಾರಣವಾದರೂ,  ಕ್ಯಾನ್ಸರ್ ನ ಅಪಾಯ ಮತ್ತು ಮುನ್ಸೂಚನೆ ಕುರಿತ ದೇಶದಾದ್ಯಂತ ಸರ್ಕಾರ ಸಂಚಲಿತ ಯಾವುದೇ ಕಾರ್ಯಕ್ರಮ ಇಲ್ಲ ಎಂದು  ಅವರು ಹೇಳಿದರು. ಪಶ್ಚಿಮ ದೇಶಗಳಿಗೆ ಭಿನ್ನವಾಗಿ, ಕ್ಯಾನ್ಸರ್ ಭಾರತದಲ್ಲಿ ಬಲು ಬೇಗ ಕಾಣಿಸಿಕೊಳ್ಳುತ್ತದೆ ಎಂದರು.

ಕ್ಯಾನ್ಸರ್ ನ ಚಿಹ್ನೆಗಳು ಮತ್ತು ಲಕ್ಷಣಗಳು

ಬಹುತೇಕ ಲಕ್ಷಣಗಳು ಸಾಮಾನ್ಯವಾಗಿದ್ದು, ಮೂರು  ವಾರ ಕಳೆದರೂ ಹೋಗಲಾದರೆ, ವೈದ್ಯರ ಸಲಹೆ ಪಡೆಯುವುದು ಉಚಿತ.  ಶೀಘ್ರ ಪತ್ತೆ  ಹಚ್ಚುವಿಕೆ,  ಕ್ಯಾನ್ಸರ್ ಚಿಕಿತ್ಸೆಯ ಅತಿ ಮಹತ್ವದ ಪಾತ್ರ. 

ಅವರು ಕ್ಯಾನ್ಸರ್ ಗುರುತಿಸುವ ೭ ಎಚ್ಚರಿಕೆಯ ಗುರುತುಗಳನ್ನು ವಿವರಿಸಿದರು:

  • ಯಾವ ತರಹದಾದರೂ  ರಕ್ತಸ್ರಾವ, ಕಾರಣವಿಲ್ಲದೆ
  • ದೇಹದ ಯಾವುದೇ ಭಾಗದಲ್ಲಿ ಹೋಗಲಾರದ ಗೆಡ್ಡೆ, ಮೊಲೆ ಒಳಗೊಂಡು
  • ನಿರಂತರ ಕೆಮ್ಮಲು, ಅಥವಾ ನಿರಂತರ ಮಾತಾಡುವ ತೊಂದರೆ
  • ನಿರಂತರ ವಾಕರಿಕೆ ಅಥವಾ ಆಹಾರ ನುಂಗುವುದರಲ್ಲಿ ತೊಂದರೆ
  • ಮಲ ವಿಸರ್ಜನೆ ಆವರ್ತನಗಳಲ್ಲಿ ಬದಲಾವಣೆ
  • ನೋಯುತ್ತಿರುವ ಗಂಟಲು, ಒಂದು ಕಡೆ ಮಾತ್ರ
  • ಬದಲಾವಣೆ ಮಚ್ಚೆಯ ಗಾತ್ರ ಅಥವ ಆಕಾರದಲ್ಲಿ

ಲಕ್ಷಣಗಳು- ಮಿತ್ರ ಕ್ಯಾನ್ಕೇರ್ ಸಂಸ್ಥೆಯು ಸಾಮಾನ್ಯ ತರಹದ ಕ್ಯಾನ್ಸರ್ ಆಗುವ ಲಕ್ಷಣಗಳ ಪಟ್ಟಿಯನ್ನು ತಯಾರಿಸಿದೆ – ಸುಲಭ ಮತ್ತು ಚಿತ್ರಗಳನ್ನು ಒಳಗೊಂಡ  ಕ್ಯಾನ್ಸರ್ ಮಾಹಿತಿಯನ್ನು, ಕನ್ನಡದಲ್ಲಿ ಪಡೆಯಲು, ಮಿತ್ರ ಕ್ಯಾನ್ಕೇರ್ ಸಂಸ್ಥೆಯ ವೆಬ್ ಸೈಟ್ www.mitracancare.org  ನೋಡಿ.  ಮುಖಪುಟದಲ್ಲಿ ( ಹೋಂ ಪೇಜ್ ನಲ್ಲಿ) ಕನ್ನಡ ಭಾಷೆ ಆರಿಸಿಕೊಳ್ಳಿ.

ಕ್ಯಾನ್ಸರ್ ರೋಗನಿರ್ಣಯ

ಮುಂದುವರಿದು ಅವರು ಕ್ಯಾನ್ಸರ್ ಅನ್ನು ಶೀಘ್ರ ಪತ್ತೆ ಹಚ್ಚುವ ವಿನೂತನ ಆವಿಷ್ಕಾರಕ ತಂತ್ರಗಳ ಬಗ್ಗೆ ಮಾತನಾಡಿದರು.ಈ ರೋಗ ಗುಣಪಡಿಸಲು ಶೀಘ್ರ ಪತ್ತೆ ಹಚ್ಚುವುದು ಅನಿವಾರ್ಯ. ಬಹಳಷ್ಟು ಸಲ ಕ್ಯಾನ್ಸರ್ ಪತ್ತೆ ಹಚ್ಚಲು ಸುಲಭ ತಂತ್ರಗಳಿಂದ,

  • ಒಳ್ಳೆಯ ಬೆಳಕು
  • ಚುರುಕಾದ ಕಣ್ಣುಗಳು
  • ಸಂಶಯಾತ್ಮಕ ಮೆದುಳು
  • ಸೂಕ್ಷ್ಮ ಬೆರಳುಗಳು

ಕ್ಯಾನ್ಸರ್ ತಡೆಗಟ್ಟುವಿಕೆ

ಕ್ಯಾನ್ಸರ್ ಬಗ್ಗೆ ಮಾತನಾಡುತ್ತಾ,, ಉತ್ತಮ ಜೀವನಶೈಲಿಯನ್ನು ಕಾಪಾಡಿಕೊಂಡು ಇರುವುದು ಉತ್ತಮ ಜೀವನಕ್ಕೆ  ಮುಖ್ಯವಾದರೂ, ದೇಹದಲ್ಲಿ ಎಲ್ಲಾದರೂ ಕ್ಯಾನ್ಸರ್ ಆಗಬಹುದಾದ  ಅವಕಾಶಗಳು ಇವೆ ಎಂದರು.  ಅದಕ್ಕೆ ವಿರುದ್ಧವಾಗಿ, ಕೆಲವು ಕೆಟ್ಟ ಜೀವನಶೈಲಿ ರೂಢಿಗಳು ಕ್ಯಾನ್ಸರ್ ಗೆ ಕಾರಣಗಳಾಗಿವೆ. ಭಾರತದಲ್ಲಿ ತಂಬಾಕು  ಬಳಕೆಯನ್ನು ಉಲ್ಲೇಖಿಸಿ, ಬಹಳಷ್ಟು ತಲೆ ಮತ್ತು ಕತ್ತಿನ ಕ್ಯಾನ್ಸರ್ ತಂಬಾಕು ಬಳಕೆಯಿಂದ ಆಗುವುದೆಂದರು.

ಕ್ಯಾನ್ಸರ್ ಗುಣಪಡಿಸಬಹುದು

ಇತರ ಸಾಮಾನ್ಯ ಖಾಯಿಲೆಗಳಾದ  ಡಯಾಬಿಟೀಸ್, ಹೈಪರ್ ಟೆನ್ಶ್ನನ್ (ರಕ್ತದ ಒತ್ತಡ) , ಆಸ್ಟಿಯೋ ಆರ್ಥ್ರೈಟಿಸ್ (ಮೂಳೆಯ ಕೀಲುನೋವು) ಗಳ ತರಹ  ಕ್ಯಾನ್ಸರ್ ಕೂಡ ಗುಣ ಪಡಿಸಬಹುದು ಎಂದು ಒತ್ತಿ ಹೇಳಿದರು. ಆದರೆ ಒಂದು ವ್ಯತ್ಯಾಸ ವೇನಂದರೆ, ಕ್ಯಾನ್ಸರ್ ಜೀವನದ ಎಲ್ಲ ಅಂಶಗಳನ್ನು ಪ್ರಭಾವಿಸುತ್ತದೆ – ದೈಹಿಕ, ಮಾನಸಿಕ, ಸಾಮಾಜಿಕ, ಆರ್ಥಿಕ, ಮತ್ತು ಧಾರ್ಮಿಕ. ಉತ್ತಮ ಜೀವನಕ್ಕೆ ಹಾನಿಕರ.

ಸಮಾಜದಲ್ಲಿ ಕ್ಯಾನ್ಸರ್ ಬಗ್ಗೆ ಅರಿವು

ಅವರು ಒಂದು ಮುಖ್ಯವಾದ ವಿಷಯವೇನೆಂದರೆ  ಕ್ಯಾನ್ಸರ್ ನಲ್ಲಿ ಆಸಕ್ತಿ ಇರುವುದು ರೋಗಿಯನ್ನು ಮೀರಿ ಬಹಳಷ್ಟು ಜನರಿದ್ದಾರೆ ಎಂಬುದನ್ನು ಮುಂದಕ್ಕೆ ತಂದರು. ರೋಗಿಯ ಜೊತೆಗೆ ಕುಟುಂಬದವರು ಹೊರೆ ಎತ್ತಿದ್ದಾರೆ.

ಕ್ಯಾನ್ಸರ್ ಪ್ರಕರಣಗಳು ಸಮಾಜಕ್ಕೆ ಆಸಕ್ತಿ ಉಳ್ಳದ್ದು, ಯಾಕೆಂದರೆ ಸ್ಥಾನೀಯ ಮಾಹಿತಿಗಳು ನಮ್ಮನ್ನು ಸಾಮಾನ್ಯ ಕ್ಯಾನ್ಸರ್ ಗಳು ಮತ್ತು ಅವುಗಳ ಸ್ಥಾನೀಯ ಕಾರಣಗಳತ್ತ ನಮ್ಮನ್ನು ಕರೆದೊಯ್ಯುತ್ತದೆ, ಎಂದು ಪುನರೀ ಕರಿಸಿದರು.  ದುರದೃಷ್ಟವಶಾತ್, ನಮ್ಮಲ್ಲಿ,  ಸಮುದಾಯದಲ್ಲಿ ಅಪಾಯಗಳ ದೂರದೃಷ್ಟಿ ಇರುವವರೂ ಇಲ್ಲ ಹಾಗೂ ಸರಿಯಾದ ಮಾಹಿತಿ ತಿಳಿದು ಕೊಂಡು ಕ್ಯಾನ್ಸರ್ ಅನ್ನು ಶೀಘ್ರದಲ್ಲಿ ಪತ್ತೆ ಹಚ್ಚುವ  ಡಾಕ್ಟರ್ ಗಳೂ ಇಲ್ಲ. ಇತರ ಆಸಕ್ತಿಯಿರುವ ವರೆಂದರೆ ಸಂಶೋಧನಾ ತಜ್ನರು ಮತ್ತು ಆರೋಗ್ಯ ಸಂಸ್ಥೆಗಳು. ನಮ್ಮಲ್ಲಿ ಮಾಹಿತಿ ಒಟ್ಟುಗೂಡಿಸುವ 

ಮೂಲಸೌಕರ್ಯಗಳು ಹಾಗೂ ಒಂಕಾಲಜಿ ಸಂಸ್ಥೆಗಳು ಇಲ್ಲವೆಂದು ಪುನರುಚ್ಚರಿಸಿದರು. ಇದ್ದಿದ್ದರೆ ಒಟ್ಟುಗೂಡಿಸಿದ ಮಾಹಿತಿಯನ್ನು ಶೋಧಿಸಿ, ಪರಿಣಾಮಗಳನ್ನು ಸಮುದಾಯದ ಡಾಕ್ಟರ್ ಗಳ ತರಬೇತಿಗಾಗಿ ಉಪಯೋಗಿಸ ಬಹುದು.

ಕ್ಯಾನ್ಸರ್ ನಿರ್ವಹಣೆ

ಪ್ರಾದೇಶಿಕ ಕೇಂದ್ರಗಳ ಲಭ್ಯವಿಲ್ಲ, ಸರ್ಕಾರದಿಂದ ತುರ್ತು ಗಮನವಿಲ್ಲ, ಇಂತಹ ಕೆಲವು ಕಾರಣಗಳಿಂದ, ಕ್ಯಾನ್ಸರ್ ನಿರ್ವಹಣೆಯ ತೊಂದರೆ ಮುಂದುವರಿಯುತ್ತಿದೆ.  ಪ್ರಾದೇಶಿಕ ಕೇಂದ್ರಗಳ ಮೂಲಕ ಸ್ಥಾನೀಯ ಸಮುದಾಯದಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ನೀಡುವುದು ಅತ್ಯಂತ ತುರ್ತಿನ ಅಗತ್ಯವಾಗಿದೆ ಎಂದರು. ರೋಗಿ ಕೇಂದ್ರಿತ ಕಾರ್ಯಕ್ರಮಗಳನ್ನು ರೂಪಿಸಬೇಕು.

ಸಮಾಜದ ಸಮಸ್ಯೆಗಳು

ಮೊದಲಿನ ತಿಳುವಳಿಕೆಯ ತರಹ ಅಲ್ಲದೆ, ಪ್ರತಿಯೊಂದು ಕ್ಯಾನ್ಸರ್ ವಿವಿಧ ರೀತಿಯಲ್ಲಿ ಹರಡುತ್ತದೆ. ಮಹಿಳೆಯರಲ್ಲಿ ಕ್ಯಾನ್ಸರ್ ವಿಷಯದಲ್ಲಿ ಮಹಿಳೆಯರು ಮುಂದೆ ಬಂದು ಸಮಸ್ಯೆಯನ್ನು ಅರಿತು ಅದರ ಚಿಕಿತ್ಸೆ ( ಟ್ರೀಟ್ಮೆಂಟ್) ಮಾಡಿಸಲಾರರು. ಬಹುಪಾಲು ಮಹಿಳೆಯರ ಕ್ಯಾನ್ಸರ್ ಮೇನೋ ಪಾಸ್ ಗೆ ಮುಂಚಿತವಾಗಿ ಕಾಣಿಸಿಕೊಳ್ಳುತ್ತವೆ. ಸ್ತನ ದ ( ಮೊಲೆಯ) ಕ್ಯಾನ್ಸರ್ ಮಹಿಳೆಯರಲ್ಲಿ ಕಾಣುವ ಸಾಮಾನ್ಯ ಕ್ಯಾನ್ಸರ್ ಮತ್ತು  ಸುಲಭ ರೀತಿಯಲ್ಲಿ ಇದನ್ನು ಪತ್ತೆ ಹಚ್ಚಬಹುದು.

ಹಳೆಯ ತಪ್ಪು ಗ್ರಹಿಕೆ ಗಳಿಂದ ಸರಿದು, ನಾವು ನೂತನ ಅಭಿವೃದ್ಧಿ ಗಳನ್ನು ಅಳವಡಿಸಿಕೊಳ್ಳಬೇಕು. ಸರ್ವಿಕ್ಸ್  ಕ್ಯಾನ್ಸರ್ ಮಹಿಳೆಯರಲ್ಲಿ ಸಾಮಾನ್ಯ ಕ್ಯಾನ್ಸರ್ ಮತ್ತು ತಡೆಗಟ್ಟಬಹುದು. ಇದಕ್ಕೆ ವ್ಯಾಕ್ಸಿನ್ ಸಿಗುತ್ತದೆ.

ಥೈರಾಯ್ಡ್  ಕ್ಯಾನ್ಸರ್ ಇನ್ನೊಂದು ಸಾಮಾನ್ಯ ಕ್ಯಾನ್ಸರ್ ಮಹಿಳೆಯರಲ್ಲಿ. ಇದನ್ನು ಸರಿಯಾದ ಚಿಕಿತ್ಸೆಯಿಂದ ಗುಣ ಪಡಿಸಬಹುದು.

ಅಸಾಮಾನ್ಯ ಸುಧಾರಣೆಗಳನ್ನು ಗುರುತಿಸಿ ತತ್ಕ್ಷಣ  ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕ್ಯಾನ್ಸರ್ ಚಿಕಿತ್ಸೆಯ ಭಯವನ್ನು ದೂರಗೊಳಿಸಿ ನೂತನ ಸುಧಾರಣೆಗಳ ಪ್ರಯೋಜನ ಪಡೆಯಬಹುದು. ಚಿಕಿತ್ಸೆಯ ಲಕ್ಷ್ಯ ಮರುಜೀವನವಾಗಿದ್ದು, ರೋಗಿಯು ನಿತ್ಯ ಜೀವನವನ್ನು ಮುಂದುವರಿಸುವ ಹಾಗೆ ರೂಪಿಸಬೇಕು.

ಕ್ಯಾನ್ಸರ್ ಅನ್ನು ಒಂದು ಸಾಮಾನ್ಯ ಖಾಯಿಲೆಯೆಂದು ಪರಿಗಣಿಸಿ ಚಿಕಿತ್ಸೆ ನೀಡುವ ಸಮಯ ಬಂದಿದೆ.

ಪ್ರಶ್ನೋತ್ತರ

  1. ಕ್ಯಾನ್ಸರ್ ನ ಅನನ್ಯ ಲಕ್ಷಣಗಳನ್ನು ಹೇಗೆ ಗುರುತಿಸುವುದು? – ಯಾನ್ಸರ್ ಬಹುಪಾಲು ಲಕ್ಷಣಗಳು ಇಲ್ಲದೆ ಉದ್ಭವಿಸುತ್ತದೆ; ಮತ್ತು ಮಾಮ್ಮೋಗ್ರಫಿ ಅಂತಹ ಸ್ಕ್ರೀನಿಂಗ್ (ಪತ್ತೆ ಹಚ್ಚುವ) ತಂತ್ರಗಳ ಕಡೆಗೆ ತಿರುಗುವುದು ಉತ್ತಮ. ಸಮಸ್ಯೆ / ಕಾರಣಗಳು ದೊಡ್ಡದಾಗುವ ವರೆವಿಗೂ ಕಾಯಬೇಡಿ.
  2. ಮದ್ಯಪಾನ  ಕ್ಯಾನ್ಸರ್ ಗೆ ಕಾರಣವಾಗುತ್ತದೆಯೇ? – ಮದ್ಯಪಾನ  ಕ್ಯಾನ್ಸರ್ ಗೆ ಮೂಲ ಎಂದು ಕಂಡು ಹಿಡಿದಿಲ್ಲ.  ಆದರೆ ತಂಬಾಕು ಸೇವನೆಯ ಜೊತೆಗೂಡಿದರೆ ( ಕ್ಯಾನರ್ ಆಗುವ ) ಅಪಾಯ ಹೆಚ್ಚುತ್ತದೆ.
  3. How to ಆಗಾಗ್ಗೆ ಪರಿಶೀಲನೆ ಮಾಡಿಸಿಕೊಂಡು ಕ್ಯಾನ್ಸರ್ ನ ಅಪಾಯ ಹೇಗೆ ಕಡಿಮೆಯಾಗಿಸುವುದು? – ಸಮಯ ಸಮಯಕ್ಕೆ ಪರಿಶೀಲನೆ ಇಲ್ಲದಿದ್ದರೂ, ಲಕ್ಷಣಗಳು ೨-೩ ವಾರ ದೂರವಾಗದಿದ್ದರೆ, ಕ್ಯಾನ್ಸರ್ ಶಂಕಿಸಬಹುದು. ಕ್ಯಾನ್ಸರ್ ದೇಹದ ಕಾಣಿಸಿಕೊಳ್ಳುವ ಕಾಣದಿರುವ ಅಂಗಾಂಗಗಳಲ್ಲಿ ಇವೆ. ಊ. ದಾ. ಲಿವರ್ ( ಯುಕೃತ್) ನ ಕ್ಯಾನ್ಸರ್ ಬಹುಕಾಲ ಕಾಣಿಸಿಕೊಳ್ಳದೆ ಇದ್ದು ಕಂಡು ಹಿಡಿಯಲಾಗದು. ಆದ್ದರಿಂದ ಲಕ್ಷಣಗಳು ನಿರಂತರ ಕಾಣಿಸಿಕೊಂಡಾಗ  ( ಹೋಗಲಾರದು) , ಕ್ಯಾನ್ಸರ್ ಪತ್ತೆ ಹಚ್ಚಬಹುದು.
  4. ಮಾಮ್ಮೋಗ್ರಾಂ ಎಷ್ಟು ಆಗಾಗ್ಗೆ ಮಾಡಿಸಬೇಕು? – ಅದು ಅಪಾಯ ಲಕ್ಷಣಗಳ ಮೇಲೆ ನಿರ್ಭರವಾಗಿದೆ. ಊ.ದಾ. ಮಕ್ಕಳಿಲ್ಲದೆ ಇರುವ ಮಹಿಳೆಯರು, ಇತ್ಯಾದಿ. ಸ್ಕ್ಯಾನಿಂಗ್ ಮೂವತ್ತು (೩೦) ವಯಸ್ಸಿನಿಂದ ಪ್ರಾರಂಭಿಸುವುದು.
  5. ಕ್ಯಾನ್ಸರ್ ನ ವಂಶಪಾರಂಪರ್ಯ ಅಂಶಗಳನ್ನು ತಿಳಿಸಿರಿ ಮತ್ತು.  ಜೀನೋಂ ಸೀಕ್ವೆನ್ಸ್  ಸಹಾಯಕರ ವಾಗುವೆದೇ – ಎಲ್ಲಾ ಕ್ಯಾನ್ಸರ್ ಗಳು ವಂಶಪಾರಂಪರ್ಯ ವಾಗಿ ಹರಡುವುದಿಲ್ಲ. ಜೀನೋಂ ಸೀಕ್ವೆನ್ಸ್  ದುಬಾರಿ ಬೆಲೆ
  6. ಕ್ಯಾನ್ಸರ್ ಅಟೋ – ಇಮ್ಮ್ಯುನ್ ಖಾಯಿಲೆಗಳ ಲಕ್ಷಣಗಳನ್ನು ಪ್ರತಿಕೃತಿಸುತ್ತದೆ? – ಇಮ್ಮ್ಯುನ್  ವ್ಯವಸ್ಥೆಗಳಿಂದ ಕ್ಯಾನ್ಸರ್  ಉದ್ಭವಿಸುತ್ತದೆ ಎಂಬ ಯೋಚನೆಯೂ ಇದೆ ಹಾಗೂ  ಸಂಶೋಧನೆ ಹಂತದಲ್ಲಿದೆ. ಇಮ್ಮುನಿಟಿಯ ಅಭಾವ ಮತ್ತು ಕ್ಯಾನ್ಸರ್ ಗೆ ಸಂಬಂಧವಿದೆ.
  7. ಡಯಾಬಿಟೀಸ್ ರೋಗಿಗಳಲ್ಲಿ ತೂಕ ಕಡಿಮೆಯಾದರೆ ಅದು ಕ್ಯಾನ್ಸರ್ ನ ಲಕ್ಷಣವೇ? – ಕಾರಣವಿಲ್ಲದೆ ತೂಕ ಕಡಿಮೆಯಾಗುವುದು, ಕ್ಯಾನ್ಸರ್ ನ ಮುಖ್ಯ ಲಕ್ಷಣ. ಡಯಾಬಿಟೀಸ್ ರೋಗಿಗಳಲ್ಲಿ ತೂಕ ಕಡಿಮೆಯಾದಲ್ಲಿ, ಅದನ್ನು ಕೂಡಲೇ ತಪಾಸಣೆ ಮಾಡಿಸಬೇಕು.
  8. ವಿಟಮಿನ್ಸ್ ಮತ್ತು ವಿಟಮಿನ್ ಸಿ ನ ಪಾತ್ರವೇನು? – ವಿಟಮಿನ್ ಸಿ ಮುಖ್ಯವಾದುದು.   ಲೇಪನಗಳಲ್ಲಿ ಆಗುವ ಕ್ಯಾನ್ಸರ,  ವಿಟಮಿನ್ ಸಿ ಮತ್ತು ವಿಟಮಿನ್ ಎ ಅಭಾವಾದಿಂದ.
  9. ಮೂಳೆಯ ಕ್ಯಾನ್ಸರ್ – ಯಾವ ಹಂತದಲ್ಲಿ ಕಾಣಿಸಿ ಕೊಳ್ಳುತ್ತದೆ? ಅದು ಅಂಗಾಂಶಗಳ ಕ್ಯಾನ್ಸರ್ ತರಹವೇ? – ಮೂಳೆಯೂ ಒಂದು ಅಂಗಾಂಶ. ಕೀಮೋ ಥೆರಪಿ ಇಂದ   ಗುಣಪಡಿಸಬಹುದು.