ಮೂತ್ರಕೋಶದ ಕ್ಯಾನ್ಸರ್ ಬಹುತೇಕ ಮೂತ್ರಕೋಶದ ಲೇಪನದ ಜೀವಕೋಶಗಳಲ್ಲಿ (ಯೂರೋ ತೆಲಿಯಲ್ ಜೀವಕೋಶಗಳು) ಪ್ರಾರಂಭವಾಗುತ್ತದೆ. ಕೆಳಗಿರುವ ಚಿಹ್ನೆ ಮತ್ತು ರೋಗಲಕ್ಷಣಗಳು ಮೂತ್ರಕೋಶ ಕ್ಯಾನ್ಸರ್ ನಲ್ಲಿ ಕಂಡಬರಬಹುದು:
ಲಕ್ಷಣಗಳು
ಕೆಲವೊಮ್ಮೆ ಮೂತ್ರಕೋಶ ಕ್ಯಾನ್ಸರ್ ರೋಗಲಕ್ಷಣಗಳು ಕಂಡುಬಂದಾಗ, ಕ್ಯಾನ್ಸರ್ ಆಗಲೇ ಇತರೆ ಅಂಗಗಳಿಗೆ ಹರಡಿರುತ್ತದೆ. ರೋಗಲಕ್ಷಣಗಳು, ಕ್ಯಾನ್ಸರ್ ಎಲ್ಲೆಲ್ಲಿ ಹರಡಿದೆಯೋ ಅದರ ಮೇಲೆ ಅವಲಂಬಿಸಿದೆ.
ಮೂತ್ರದಲ್ಲಿ ರಕ್ತ/ ರಕ್ತದ ಹೆಪ್ಪುಗಟ್ಟುವಿಕೆ (ಕ್ಲಾಟ್ಸ್ )
ರಕ್ತದ ಕ್ಯಾನ್ಸರ್ ಅಥವ ಲುಕೆಮಿಯಾ ರಕ್ತದ ಜೀವಕೋಶಗಳ ಮತ್ತು ಮೂಳೆಯ ಮ್ಯಾರೋ ಮೇಲೆ ಪ್ರಭಾವ ಬೀಳುತ್ತದೆ. ಅಕ್ಯೂಟ್ ಅಥವ ಕ್ರಾನಿಕ್ ಲುಕೆಮಿಯಾ, ಮಲ್ಟಿಪಲ್ ಮೈಲೋಮಾ ಮತ್ತು ಲಿಂಫೋಮಾ, ರಕ್ತದ ಕ್ಯಾನ್ಸರ್ ನ ವಿವಿಧ ತರಹಗಳಲ್ಲಿ ಒಳಗೊಂಡಿದೆ.
ಲಕ್ಷಣಗಳು
ರಕ್ತದ ಕ್ಯಾನ್ಸರ್ ಚಿಹ್ನೆ ಮತ್ತು ಲಕ್ಷಣಗಳಲ್ಲಿ ಸೇರಿರಬಹುದು:
ಯಾವ ಲಕ್ಷಣಗಳೂ ಇಲ್ಲ
ಪದೇಪದೇ ಜ್ವರ / ಸೋಂಕು (ಇನ್ಫೆಕ್ಷನ್ )
ಆಯಾಸ, ತೂಕ ಕಡಿಮೆಯಾಗುವುದು ಅಥವಾ ಬಿಳಿಚಿಕೊಳ್ಳುವುದು
ಮೂಳೆಯ ನೋವು
ರಕ್ತಸ್ರಾವ ಅಥವ ಏಟಿನಿಂದ ನೀಲವಾದ ಚರ್ಮದ ಹಾಗೆ (ಬ್ರುಯಿಸಿಂಗ್)
ಮಿದುಳಿನ ಕ್ಯಾನ್ಸರ್ ಮಿದುಳಿನಲ್ಲಿ ಬೆಳೆಯುವ ಅಸಹಜ ಜೀವಕೋಶಗಳು. ಪ್ರಾರಂಭದಲ್ಲಿ ಯಾವುದೇ ಲಕ್ಷಣಗಳು ಇಲ್ಲದಿರಬಹುದು ಅಥವ ತೀವ್ರ ಲಕ್ಷಣಗಳೂ ಇರಬಹುದು. ಚಟುವಟಿಕೆಯಿಂದ ಲಕ್ಷಣಗಳು ಜಾಸ್ಥಿಯಾಗಬಹುದು. ಮಿದುಳಿನ ಅಥವ ಸ್ಪೈನಲ್ ಕಾರ್ಡ್ ನ ಮೇಲೆ ಗೆಡ್ಡೆಗಳ (ಟ್ಯೂಮರ್) ಒತ್ತಡದಿಂದ ಲಕ್ಷಣಗಳು ಉದ್ಭವಿಸುತ್ತವೆ.
ಲಕ್ಷಣಗಳು
ಗೆಡ್ಡೆಗಳು ಇರುವ ಸ್ಥಾನದ ಪ್ರಕಾರ ಲಕ್ಷಣಗಳು ಬದಲಾಗುತ್ತವೆ:
ತಲೆನೋವು – ತೀವ್ರ / ನಿರಂತರ, ಮುಂಜಾನೆ, ವಾಂತಿಕೂಡಿ/ಇಲ್ಲದೆ
ಜ್ಞಾನ ತಪ್ಪುವುದು, ತೂಕಡಿಕೆ, ರೋಗಗ್ರಸ್ಥ ವಾಗುವಿಕೆ ( ಸೀಝರ್ಸ್), ಸೆಳೆತ, ಪದೇಪದೇ ಬೀಳುವುದು, ತಲೆ ಸುತ್ತುವುದು, ತಲೆತಿರುಗುವಿಕೆ (ವರ್ಟಿಗೋ)
ಸ್ನಾಯುವಿನ ಲಕ್ಷಣಗಳು – ಪಾರ್ಶ್ವವಾಯು, ದೇಹದ ಒಂದು ಕಡೆಯ ದುರ್ಬಲ, ನಡೆಯಲು ಕಷ್ಟಕರ
ಸಂವೇದನಾಶೀಲ ಲಕ್ಷಣಗಳು – ಪಿನ್ ಗಳು ಮತ್ತು ಸೂಜಿಗಳ ಸಂವೇದನೆ, ಕಡಿಮೆಯಾದ ಸಂವೇದನೆ, ಸಮನ್ವಯತೆಯಲ್ಲಿ (ಕೋ ಆರ್ಡಿನೇಷನ್) ತೊಂದರೆ
ಗ್ರಹಣಶಕ್ತಿಯ ( ಅರಿವಿನ) ಲಕ್ಷಣಗಳು – ಮಾನಸಿಕ ಗೊಂದಲ, ಮಾತು ಮತ್ತು ಕೇಳಿಸಿಕೊಳ್ಳುವ ಶಕ್ತಿಯಲ್ಲಿ ನಷ್ಟ, ಶಬ್ಧ ಗ್ರಹಣದಲ್ಲಿ ತೊಂದರೆ/ ಅಸಮರ್ಥತೆ, ಜ್ಞಾಪಕಶಕ್ತಿಯಲ್ಲಿ ನಷ್ಟ, ಮಂಜಿನ ದೃಷ್ಟಿ
ಪಿತುಟರಿ ಗ್ರಂಥಿ – ಹಾಲುಣಿಸಿವಿಕೆಯಲ್ಲಿ
ಮತ್ತು ಮುಟ್ಟಿನಲ್ಲಿ ಅಸ್ವಸ್ಥತೆ.
ಮಿದುಳಿನ ಕಾಂಡ – ಮುಖದಲ್ಲಿ ದೌರ್ಬಲ್ಯ, ಮರಗಟ್ಟುವಿಕೆ, ಎರಡು (ಕಾಣಿಸುವ) ದೃಷ್ಟಿ