ಭಾರತದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕ್ಯಾನ್ಸರ್ಗಳು

ಭಾರತದ ಸಾಮಾನ್ಯ ಕ್ಯಾನ್ಸರ್ಗಳು

ಭಾರತದಲ್ಲಿ ಎದುರುಗೊಳ್ಳುವ ಸಾಮಾನ್ಯ ಕ್ಯಾನ್ಸರ್ ಗಳ  ಅಕ್ಷರಮಾಲೆಯ ಪಟ್ಟಿ ಕೆಳಗಿವೆ :

ಬಾಲ್ಯದ ಕ್ಯಾನ್ಸರ್

ಬಾಲ್ಯದ ಕ್ಯಾನ್ಸರ್ ವಿವಿಧ ತರಹದ್ದಿರಬಹುದು.

ಲಕ್ಷಣಗಳು

ಬಾಲ್ಯದ ಕ್ಯಾನ್ಸರ್ ಲಕ್ಷಣಗಳಲ್ಲಿ ಸೇರಿರಬಹುದು:

ಪದೇಪದೇ ಜ್ವರ/ಸೋಂಕು (ಇನ್ಫೆಕ್ಷನ್)

ಮುಂಜಾನೆಯ ತಲೇನೂವು, ವಾಂತಿಯ ಜೊತೆಗೆ,  ಇಲ್ಲವೇ

ಕಾರಣವಿಲ್ಲದೆ ಅನೀಮಿಯಾ ಅಥವಾ ಬಿಳಿಚಿಕೊಳ್ಳುವುದು

ಕಾರಣವಿಲ್ಲದೆ ತೂಕ ಕಡಿಮೆಯಾಗುವುದು

ದೇಹದ ಯಾವುದಾದರೂ ಭಾಗದಲ್ಲಿ ನೋವು ಉ. ದಾ. ಮೂಳೆಯಲ್ಲಿ

ಕುಂಟುವುದು

ಸಮತೋಲನ (ಬ್ಯಾಲನ್ಸ್)  ಅಥವಾ ಮಾತಿನಲ್ಲಿ ಬದಲಾವಣೆ

ಅಸಮಾನ್ಯ ಊತ ಅಥವಾ ಗೆಡ್ಡೆ

ಏಟಿನಿಂದ ನೀಲವಾದ ಚರ್ಮದ ಹಾಗೆ (ಬ್ರುಯಿಸಿಂಗ್) ಸುಲಭವಾಗಿ ಆದರೆ

ಹಠಾತ್ತಾಗಿ (ಸಡನ್) ದೃಷ್ಟಿ ಬದಲಾವಣೆ

<- ಹಿಂತಿರುಗಿ


ಮೂತ್ರಕೋಶ ಕ್ಯಾನ್ಸರ್

ಮೂತ್ರಕೋಶದ ಕ್ಯಾನ್ಸರ್  ಬಹುತೇಕ  ಮೂತ್ರಕೋಶದ ಲೇಪನದ ಜೀವಕೋಶಗಳಲ್ಲಿ (ಯೂರೋ ತೆಲಿಯಲ್ ಜೀವಕೋಶಗಳು) ಪ್ರಾರಂಭವಾಗುತ್ತದೆ. ಕೆಳಗಿರುವ  ಚಿಹ್ನೆ ಮತ್ತು ರೋಗಲಕ್ಷಣಗಳು ಮೂತ್ರಕೋಶ  ಕ್ಯಾನ್ಸರ್ ನಲ್ಲಿ ಕಂಡಬರಬಹುದು:

ಲಕ್ಷಣಗಳು

ಕೆಲವೊಮ್ಮೆ ಮೂತ್ರಕೋಶ ಕ್ಯಾನ್ಸರ್ ರೋಗಲಕ್ಷಣಗಳು ಕಂಡುಬಂದಾಗ, ಕ್ಯಾನ್ಸರ್ ಆಗಲೇ   ಇತರೆ ಅಂಗಗಳಿಗೆ ಹರಡಿರುತ್ತದೆ. ರೋಗಲಕ್ಷಣಗಳು, ಕ್ಯಾನ್ಸರ್   ಎಲ್ಲೆಲ್ಲಿ ಹರಡಿದೆಯೋ ಅದರ ಮೇಲೆ ಅವಲಂಬಿಸಿದೆ.

ಮೂತ್ರದಲ್ಲಿ ರಕ್ತ/  ರಕ್ತದ ಹೆಪ್ಪುಗಟ್ಟುವಿಕೆ (ಕ್ಲಾಟ್ಸ್ )

ಆಯಾಸ / ತೂಕ ಇಳಿಕೆ / ಬಿಳಿಚಿಕೊಳ್ಳುವುದು

ಆಗಾಗ್ಗೆ ಮೂತ್ರ ವಿಸರ್ಜನೆ  ಮಾಡುವುದು

ಪದೇಪದೇ ಮೂತ್ರ ವಿಸರ್ಜನೆ ಮಾಡುವ ಇಚ್ಚೆ

ಕೆಳಬಾಘದ ಬೆನ್ನಿನ ನೋವು

ಮೂತ್ರ ವಿಸರ್ಜನೆ  ಮಾಡುವಾಗ ನೋವು/ ಉರಿ

<- ಹಿಂತಿರುಗಿ


ರಕ್ತದ ಕ್ಯಾನ್ಸರ್

ರಕ್ತದ ಕ್ಯಾನ್ಸರ್ ಅಥವ ಲುಕೆಮಿಯಾ ರಕ್ತದ ಜೀವಕೋಶಗಳ ಮತ್ತು ಮೂಳೆಯ ಮ್ಯಾರೋ ಮೇಲೆ ಪ್ರಭಾವ ಬೀಳುತ್ತದೆ. ಅಕ್ಯೂಟ್ ಅಥವ ಕ್ರಾನಿಕ್ ಲುಕೆಮಿಯಾ, ಮಲ್ಟಿಪಲ್ ಮೈಲೋಮಾ ಮತ್ತು ಲಿಂಫೋಮಾ, ರಕ್ತದ ಕ್ಯಾನ್ಸರ್ ನ ವಿವಿಧ ತರಹಗಳಲ್ಲಿ  ಒಳಗೊಂಡಿದೆ.

ಲಕ್ಷಣಗಳು

ರಕ್ತದ ಕ್ಯಾನ್ಸರ್ ಚಿಹ್ನೆ ಮತ್ತು   ಲಕ್ಷಣಗಳಲ್ಲಿ ಸೇರಿರಬಹುದು:

ಯಾವ ಲಕ್ಷಣಗಳೂ ಇಲ್ಲ

ಪದೇಪದೇ ಜ್ವರ /  ಸೋಂಕು (ಇನ್ಫೆಕ್ಷನ್ )

ಆಯಾಸ, ತೂಕ ಕಡಿಮೆಯಾಗುವುದು ಅಥವಾ ಬಿಳಿಚಿಕೊಳ್ಳುವುದು

ಮೂಳೆಯ ನೋವು

ರಕ್ತಸ್ರಾವ ಅಥವ ಏಟಿನಿಂದ ನೀಲವಾದ ಚರ್ಮದ ಹಾಗೆ (ಬ್ರುಯಿಸಿಂಗ್)

ಲಿಂಫ್ ನೋಡ್ ಊದಿಕೊಳ್ಳುವುದು

<- ಹಿಂತಿರುಗಿ


ಮೂಳೆಯ ಕ್ಯಾನ್ಸರ್

ನಿಯಂತ್ರಣ ತಪ್ಪಿ ಅಸಾಮಾನ್ಯ ಜೀವಕೋಶಗಳು ಮೂಳೆಯಲ್ಲಿ   ಬೆಳೆದಾಗ,   ಮೂಳೆಯ ಕ್ಯಾನ್ಸರ್ ಗೊತ್ತಾಗುತ್ತದೆ.

ಲಕ್ಷಣಗಳು

ಮೂಳೆಯ tಕ್ಯಾನ್ಸರ್ ಚಿಹ್ನೆ ಮತ್ತು ಲಕ್ಷಣಗಳಲ್ಲಿ ಸೇರಿರಬಹುದು:

ಟ್ಯುಮರ್  ( ಗೆಡ್ಡೆ ) ಇರುವ ಜಾಗದಲ್ಲಿ ನೋವು ಮತ್ತು/ ಅಥವ ಊತ

ಮೂಳೆ ಜಂಟಿಯಲ್ಲಿ ಊತ ಅಥವ  ಬಿಗಿತ

ಒಮ್ಮೊಮ್ಮೆ ಜ್ವರ

ಆಯಾಸ, ತೂಕ ಕಡಿಮೆಯಾಗುವುದು, ಅನಿಮಿಯಾ

<- ಹಿಂತಿರುಗಿ


ಮಿದುಳಿನ ಕ್ಯಾನ್ಸರ್

ಮಿದುಳಿನ ಕ್ಯಾನ್ಸರ್ ಮಿದುಳಿನಲ್ಲಿ  ಬೆಳೆಯುವ ಅಸಹಜ ಜೀವಕೋಶಗಳು. ಪ್ರಾರಂಭದಲ್ಲಿ ಯಾವುದೇ ಲಕ್ಷಣಗಳು ಇಲ್ಲದಿರಬಹುದು ಅಥವ ತೀವ್ರ ಲಕ್ಷಣಗಳೂ ಇರಬಹುದು. ಚಟುವಟಿಕೆಯಿಂದ ಲಕ್ಷಣಗಳು ಜಾಸ್ಥಿಯಾಗಬಹುದು. ಮಿದುಳಿನ ಅಥವ ಸ್ಪೈನಲ್ ಕಾರ್ಡ್ ನ ಮೇಲೆ ಗೆಡ್ಡೆಗಳ (ಟ್ಯೂಮರ್) ಒತ್ತಡದಿಂದ ಲಕ್ಷಣಗಳು ಉದ್ಭವಿಸುತ್ತವೆ.

ಲಕ್ಷಣಗಳು

ಗೆಡ್ಡೆಗಳು ಇರುವ ಸ್ಥಾನದ ಪ್ರಕಾರ ಲಕ್ಷಣಗಳು ಬದಲಾಗುತ್ತವೆ:

ತಲೆನೋವು – ತೀವ್ರ / ನಿರಂತರ, ಮುಂಜಾನೆ, ವಾಂತಿಕೂಡಿ/ಇಲ್ಲದೆ

ಜ್ಞಾನ ತಪ್ಪುವುದು, ತೂಕಡಿಕೆ, ರೋಗಗ್ರಸ್ಥ ವಾಗುವಿಕೆ ( ಸೀಝರ್ಸ್), ಸೆಳೆತ, ಪದೇಪದೇ ಬೀಳುವುದು, ತಲೆ ಸುತ್ತುವುದು, ತಲೆತಿರುಗುವಿಕೆ (ವರ್ಟಿಗೋ)

ಸ್ನಾಯುವಿನ  ಲಕ್ಷಣಗಳು – ಪಾರ್ಶ್ವವಾಯು, ದೇಹದ ಒಂದು ಕಡೆಯ ದುರ್ಬಲ, ನಡೆಯಲು ಕಷ್ಟಕರ

ಸಂವೇದನಾಶೀಲ ಲಕ್ಷಣಗಳು – ಪಿನ್ ಗಳು ಮತ್ತು ಸೂಜಿಗಳ ಸಂವೇದನೆ,  ಕಡಿಮೆಯಾದ ಸಂವೇದನೆ, ಸಮನ್ವಯತೆಯಲ್ಲಿ (ಕೋ ಆರ್ಡಿನೇಷನ್) ತೊಂದರೆ

ಗ್ರಹಣಶಕ್ತಿಯ ( ಅರಿವಿನ)  ಲಕ್ಷಣಗಳು –  ಮಾನಸಿಕ ಗೊಂದಲ, ಮಾತು ಮತ್ತು ಕೇಳಿಸಿಕೊಳ್ಳುವ ಶಕ್ತಿಯಲ್ಲಿ ನಷ್ಟ, ಶಬ್ಧ ಗ್ರಹಣದಲ್ಲಿ ತೊಂದರೆ/  ಅಸಮರ್ಥತೆ, ಜ್ಞಾಪಕಶಕ್ತಿಯಲ್ಲಿ ನಷ್ಟ, ಮಂಜಿನ ದೃಷ್ಟಿ

ಪಿತುಟರಿ ಗ್ರಂಥಿ – ಹಾಲುಣಿಸಿವಿಕೆಯಲ್ಲಿ

ಮತ್ತು ಮುಟ್ಟಿನಲ್ಲಿ ಅಸ್ವಸ್ಥತೆ.

ಮಿದುಳಿನ ಕಾಂಡ – ಮುಖದಲ್ಲಿ ದೌರ್ಬಲ್ಯ, ಮರಗಟ್ಟುವಿಕೆ, ಎರಡು (ಕಾಣಿಸುವ) ದೃಷ್ಟಿ

ಆಕ್ಸಿಪೇತಲ್ ಲೊಬ್ – ದೃಷ್ಟಿಯ ನಷ್ಟ

<- ಹಿಂತಿರುಗಿ


ಸ್ತನದ ( ಮೊಲೆಯ)  ಕ್ಯಾನ್ಸರ್

ಸ್ತನದ ಜೀವಕೋಶಗಳಲ್ಲಿ ಮೂಡುವ ಕ್ಯಾನ್ಸರ್.

ಲಕ್ಷಣಗಳು

ಸ್ತನದ ಕ್ಯಾನ್ಸರ್ ಲಕ್ಷಣಗಳಲ್ಲಿ ಸೇರಿರಬಹುದು:

ಸ್ತನದಲ್ಲಿ ನೋವು

ಆಕಾರ ಮತ್ತು ಗಾತ್ರದಲ್ಲಿ ಬದಲಾವಣೆ

ಸ್ತನದ ಚರ್ಮದಲ್ಲಿ  ಡಿಂಪಲ್

ಮೊಲೆ ತೊಟ್ಟು (ನಿಪ್ಪಲ್) ಒಳಗೆ ಹೋಗಿರುವುದು

ಮೊಲೆತೊಟ್ಟಿನಿಂದ ಸೋರುವುದು

ಸ್ತನ ಅಥವ  ತೋಳಿನ ಕೆಳಗೆ ಗೆಡ್ಡೆ

<- ಹಿಂತಿರುಗಿ


ಸರ್ವಿಕಲ್  ಕ್ಯಾನ್ಸರ್

ಸರ್ವಿಕಲ್  ಕ್ಯಾನ್ಸರ್  ಸರ್ವಿಕ್ಸ್ ನ  ಜೀವಕೋಶಗಳಲ್ಲಿ ಕಾಣಬರುತ್ತದೆ.

ಲಕ್ಷಣಗಳು

ಸರ್ವಿಕಲ್ ಕ್ಯಾನ್ಸರ್  ಲಕ್ಷಣಗಳಲ್ಲಿ ಸೇರಿರಬಹುದು:

ಮೊದಲಿನ ಹಂತದಲ್ಲಿ ಯಾವ ಲಕ್ಷಣಗಳೂ ಇಲ್ಲದಿರಬಹುದು

ಅವಧಿಗಳ ( ಪೀರಿಯಡ್ಸ್) ಮಧ್ಯೆ ರಕ್ತಸ್ರಾವ

ಋತುಬಂಧ (ಮೆನೋಪಾಸ್) ಆದಮೇಲೆ ರಕ್ತಸ್ರಾವ

ಯೋನಿಯಿಂದ ರಕ್ತ ಅಥವ ನೀರಿನಂತೆ  ವಿಸರ್ಜನೆ

ಮುಟ್ಟಿನ ಅಸಹಜಕತೆಗಳು

ಸಂಭೋಗದ ಸಮಯದಲ್ಲಿ ರಕ್ತಸ್ರಾವ / ನೋವು

<- ಹಿಂತಿರುಗಿ


ಕೋಲೋ- ರೆಕ್ಟಲ್ ಕ್ಯಾನ್ಸರ್

ಕೋಲೋ- ರೆಕ್ಟಲ್ ಕ್ಯಾನ್ಸರ್ ವಿಶಿಷ್ಟವಾಗಿ  ಕರುಳಿನಲ್ಲಿ ಅಥವ ಗುದನಾಳದಲ್ಲಿ ಗೆಡ್ಡೆಯಾಗಿ ಸ್ಪಷ್ಟವಾಗುತ್ತದೆ.

ಲಕ್ಷಣಗಳು

ಕ್ಯಾನ್ಸರ್  ಲಕ್ಷಣಗಳಲ್ಲಿ ಸೇರಿರಬಹುದು:

ಮೊದಲಿನ ಹಂತದಲ್ಲಿ ಯಾವ ಲಕ್ಷಣಗಳೂ ಇಲ್ಲದಿರಬಹುದು

ಬದಲಾಗಿದ ಕರುಳಿನ ಅಭ್ಯಾಸಗಳು

ಮಲಬದ್ಧತೆ

ಕಿರಿದಾದ ಮಲ/ ಮಲದಲ್ಲಿ ರಕ್ತ

ವಿಪರೀತ ಅನಿಲ ಹಾದುಹೋಗುವುದು

ಹೊಟ್ಟೆಯಲ್ಲಿ ನೋವು

ಕರುಳು ಖಾಲಿಯಾಗಿಲ್ಲ ಎಂಬ ಭಾವನೆ

ಕಾರಣವಿಲ್ಲದೆ ತೂಕ ಕಡಿಮೆಯಾಗುವುದು

<- ಹಿಂತಿರುಗಿ


ಕಣ್ಣಿನ ಕ್ಯಾನ್ಸರ್

ಕಣ್ಣಿನಲ್ಲಿ ಪ್ರಾರಂಭಿಸಿದ ಮಾರಣಾಂತಿಕತೆ ಬೆಳೆದು ಕಣ್ಣಿನ ಕ್ಯಾನ್ಸರ್ ಆಗಿ ಕಾಣಿಸಿಕೊಳ್ಳುತ್ತದೆ.

ಲಕ್ಷಣಗಳು

ಕಣ್ಣಿನ ಕ್ಯಾನ್ಸರ್ ಲಕ್ಷಣಗಳಲ್ಲಿ ಸೇರಿರಬಹುದು:

ಮಂಜು ದೃಷ್ಟಿ

ಕಣ್ಣಿನ ಒಳಗೆ ಗಾತ್ರದಲ್ಲಿ ಬೆಳೆಯುತ್ತಿರುವ ಕಪ್ಪು ತೇಪೆ/ ಕಲೆ

ಒಂದು ಕಣ್ಣು ಉಬ್ಬು

ಕಣ್ಣಿನ ರೆಪ್ಪೆಯ ಮೇಲೆ ಬೆಳೆಯುತ್ತಿರುವ ಗೆಡ್ಡೆ (ಟ್ಯುಮುರ್)

<- ಹಿಂತಿರುಗಿ