ತಲೆ ಮತ್ತು ಕತ್ತು ಸರ್ಜರಿಯಲ್ಲಿ ಪ್ರಮುಖ ತಜ್ಞರು

Dr. ಆರ್. ಪಿ. ದೇವ್

<strong>Dr. ಆರ್. ಪಿ. ದೇವ್</strong>
Dr. ಆರ್. ಪಿ. ದೇವ್

ಎಂ. ಎಸ್., ಡಿ. ಸಿ. ಸಿ. ಎಫ್., ಎಫ್. ಐ. ಸಿ. ಎಸ್
ಹಿರಿಯ ಕನ್ಸಲ್ಟೆಂಟ್ -ಕ್ಯಾನ್ಸರ್ ಸರ್ಜನ್ ( ತಲೆ ಮತ್ತು ಕತ್ತು), ತಲೆ ಮತ್ತು ಕತ್ತು ಕ್ಯಾನ್ಸರ್ ಚಿಕಿತ್ಸಾಲಯ, ಡಾಕ್ಟರ್ ರುದ್ರಪ್ಪ ಈ. ಎನ್. ಟಿ. ಆಸ್ಪತ್ರೆ ಮತ್ತು ಮಣಿಪಾಲ್ ಆಸ್ಪತ್ರೆ, ಬೆಂಗಳೂರು

ಡಾ. ರವಿ ದೇವ್ ಅವರು ಜಬಲ್‌ಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಎಂ.ಬಿ.ಬಿ. ಎಸ್. ಮಾಡಿ ನಂತರ ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಜನರಲ್ ಸರ್ಜರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ  ಹಿರಿಯ ನಿವಾಸಿಯಾಗಿ  ಕಾರ್ಯ ನಿರತರಾಗಿದ್ದಾಗ ಅವರು ತಲೆ ಮತ್ತು ಕತ್ತು ಸರ್ಜರಿ ಕ್ಷೇತ್ರದಲ್ಲಿ ತೀವ್ರ ಆಸಕ್ತಿಯನ್ನು ಬೆಳೆಸಿಕೊಂಡು, ಪ್ಯಾರಿಸ್‌ನಲ್ಲಿರುವ ಪ್ರತಿಷ್ಠಿತ ಇನ್‌ಸ್ಟಿಟ್ಯೂಟ್ ಗುಸ್ಟಾವ್-ರೌಸಿಯಿಂದ ಡಿಪ್ಲೊಮಾವನ್ನು ಪಡೆಯಲು ಕಾರಣವಾಯಿತು. ಕನ್ಸಲ್ಟೆಂಟ್ಸ್  ಆಗಿಯೂ ಕೆಲಸ ಮಾಡಿದರು.

ಭಾರತಕ್ಕೆ ಹಿಂದಿರುಗಿದ ನಂತರ, ಡಾ. ದೇವ್ 1985 ರಲ್ಲಿ, ಬೆಂಗಳೂರಿನ ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಆಂಕೊಲಾಜಿಯಲ್ಲಿ ಮೊದಲ ವಿಶೇಷ ತಲೆ ಮತ್ತು ಕತ್ತು ಆಂಕೊಲಾಜಿ ವಿಭಾಗವನ್ನು ಸ್ಥಾಪಿಸಿದರು. ಅವರು ತರುವಾಯ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸರ್ಜಿಕಲ್ ಆಂಕೊಲಾಜಿ ವಿಭಾಗವನ್ನು ಸ್ಥಾಪಿಸಿದರು, ಅಲ್ಲಿ ಅವರು ಪ್ರಸ್ತುತ ಕನ್ಸಲ್ಟೆಂಟ್ ಆಗಿದ್ದಾರೆ. ಈಗ ಅವರು ಬೆಂಗಳೂರಿನ ಬಿ.ಜಿ.ರುದ್ರಪ್ಪ ಇ.ಏನ್.ಟಿ. ಆಸ್ಪತ್ರೆಯಲ್ಲಿ ಹೆಡ್ & ನೆಕ್ ಕ್ಲಿನಿಕ್ ಅನ್ನು ನಡೆಸುತ್ತಾರೆ.

ಅವರ ವಿಶೇಷ ಆಸಕ್ತಿಯ ಕ್ಷೇತ್ರಗಳೆಂದರೆ, ಪರೋಟಿಡ್ ಮತ್ತು ಥೈರಾಯ್ಡ್  ಗ್ರಂಥಿಯ ಗೆಡ್ಡೆಗಳು, ಮತ್ತು ಈ ಕ್ಷೇತ್ರದಲ್ಲಿ ಅವರ ಅನುಭವಕ್ಕೆ ಸಾಟಿಯಿಲ್ಲ. ಹೆಡ್ ಮತ್ತು ನೆಕ್ ಆಂಕೊಲಾಜಿಸ್ಟ್ ಆಗಿ, ಅವರು ವಿಕಿರಣ ಆಂಕೊಲಾಜಿಸ್ಟ್,,  ಮೆಡಿಕಲ್ ಆಂಕೊಲಾಜಿಸ್ಟ್, ಫಾಸಿಯೊ-ಮ್ಯಾಕ್ಸಿಲ್ಲರಿ ಮತ್ತು ನ್ಯೂರೋಸರ್ಜನ್‌ಗಳಂತಹ ವಿವಿಧ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ವಿಶೇಷತೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ.

ಭಾರತದಲ್ಲಿನ ಕ್ಯಾನ್ಸರ್‌ಗಳಿಗೆ ಸಂಬಂಧಿಸಿದಂತೆ ಆರೋಗ್ಯ ಜಾಗೃತಿಯನ್ನು ಮೂಡಿಸುವಲ್ಲಿ ಡಾ. ದೇವ್ ಅವರು ತೀವ್ರ ಆಸಕ್ತಿಯನ್ನು ಹೊಂದಿದ್ದಾರೆ, ಏಕೆಂದರೆ ಆರಂಭದಲ್ಲಿ ಪತ್ತೆಯಾದರೆ, ನಮ್ಮ ಬಹುತೇಕ ಕ್ಯಾನ್ಸರ್‌ಗಳನ್ನು ಗುಣಪಡಿಸಬಹುದಾಗಿದೆ. ಅಷ್ಟೇ ಅಲ್ಲ, ಭಾರತದಲ್ಲಿ ತಂಬಾಕು ಜಗಿಯುವುದರಿಂದ ಬಾಯಿಯ ಕ್ಯಾನ್ಸರ್‌ನ ಅತಿ ಹೆಚ್ಚು ಸಂಭವವಿದೆ ಮತ್ತು ಅದನ್ನು ಸಂಪೂರ್ಣವಾಗಿ ತಡೆಗಟ್ಟಬಹುದಾಗಿದ್ದು, ಅವರು ರೋಟರಿ ಫೌಂಡೇಶನ್‌ನ ಆಶ್ರಯದಲ್ಲಿ ಈ ಕ್ಯಾನ್ಸರ್‌ಗಳ ತಪಾಸಣೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

ಬೋಧನೆ ಮತ್ತು ಶಿಕ್ಷಣದಲ್ಲಿ ಆಸಕ್ತಿ ಹೊಂದಿರುವ ಅವರು ಹಲವಾರು ಉಪನ್ಯಾಸಗಳು ಮತ್ತು ಭಾಷಣಗಳನ್ನು ನೀಡುವುದರ ಜೊತೆಗೆ ದೇಶ ಮತ್ತು ವಿದೇಶಗಳಲ್ಲಿ ಕ್ಲಿನಿಕಲ್ ಸಭೆಗಳಲ್ಲಿ ನೇರ ಶಸ್ತ್ರಚಿಕಿತ್ಸಾ ಪ್ರದರ್ಶನಗಳನ್ನು ಸಹ ನಡೆಸಿದ್ದಾರೆ.

ಡಾ. ದೇವ್ ಅವರಿಗೆ 1996 ರಲ್ಲಿ ರಾಜೀವ್ ಗಾಂಧಿ ಎಕ್ಸಲೆನ್ಸ್ ಪ್ರಶಸ್ತಿ ಮತ್ತು 2006 ರಲ್ಲಿ ಕೆಂಪೇಗೌಡ ಪ್ರಶಸ್ತಿಯನ್ನು ಭಾರತದಲ್ಲಿ ತಲೆ ಮತ್ತು ಕತ್ತು ಸರ್ಜರಿ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ನೀಡಲಾಯಿತು.

<- Go Back