ಕ್ಯಾನ್ಸರ್ ವಿಜೇತ ಮತ್ತು ಕ್ಯಾನ್ಸರ್ ರೋಗಿಗಳಿಗೆ ಕಾರ್ಯಕ್ರಮಗಳನ್ನು ನಡೆಸುವ  ಕಾರ್ಯಕರ್ತ

ಅಮರ್ ಭಾಸ್ಕರ್

ಅಮರ್ ಭಾಸ್ಕರ್
ಅಮರ್ ಭಾಸ್ಕರ್

ಎಂ. ಎಸ್ಸಿ. ಅಪ್ಪೈಡ್ ಸೈನ್ಸ್,   ಪಿ. ಎಮ್. ಪಿ.
ಪ್ರೊಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್. ಕ್ಯಾನ್ಸರ್ ವಿಜೇತ ಮತ್ತು ಕಾರ್ಯಕರ್ತ
ಪೂರ್ವ ಸಿ. ಒ.ಒ. , ಐ.ಬಿ.ಎಮ್.  ಗ್ಲೋಬಲ್ ಬ್ಯುಸಿನೆಸ್ ಸರ್ವೀಸಸ್.  ೩೫ ವರ್ಷಕಿಂತಲೂ ಹೆಚ್ಚು ಕಾರ್ಪೊರೇಟ್ ಅನುಭವ

ಅಮರ್ ಅಪ್ಲೈಡ್ ಗಣಿತದಲ್ಲಿ ಸ್ನಾತಕೋತ್ತರ ಪದವಿ , ಪ್ರೊಜೆಕ್ಟ್  ಮ್ಯಾನೇಜ್ಮೆಂಟ್ ನಲ್ಲಿ ಯೋಗ್ಯತಾಪತ್ರ, ಹಾಗೂ ೩೫ ವರ್ಷಕಿಂತಲೂ  ಹೆಚ್ಚು ಕಾರ್ಪೊರೇಟ್ ಅನುಭವ ( ಅದರಲ್ಲಿ ಬಹುಪಾಲು ಐ. ಬಿ. ಎಮ್. ಕಂಪನಿಯಲ್ಲಿ) ಪಡೆದಿದ್ದಾರೆ).  ಪ್ರೊಜೆಕ್ಟ್  ಮ್ಯಾನೇಜ್ಮೆಂಟ್  ಇನ್ಸ್ಟಿಟ್ಯೂಟ್   ಬೆಂಗಳೂರು ಶಾಖೆಯ  ಸ್ಥಾಪಕ  ಬೋರ್ಡ್ (ಮಂಡಳಿ) ಸದಸ್ಯರಾಗಿದ್ದು, ಅದರ ಬೆಂಗಳೂರು ಶಾಖೆಯಲ್ಲಿ ೨೦ ವರುಷ ವಿವಿಧ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ರೋಟರಿ ಇಂಟರ್ನ್ಯಾಷನಲ್ ಸಂಸ್ಥೆಯವರು ಇವರ ಸಾಮಾಜಿಕ ಕಾರ್ಯಕ್ರಮಗಳ  ಕೊಡುಗೆಗೆ, ಪೌಲ್ ಹಾರಿಸ್ ಫೆಲೋ ಬಿರುದು ಕೊಟ್ಟು ಪುರಸ್ಕರಿಸಿದ್ದಾರೆ.

ಇಸವಿ ೨೦೦೬ ಇವರ ಜೀವನದಲ್ಲಿ  ಒಂದು ತಿರುಗಿದ ಚಿಹ್ನೆ. ನಾಲಿಗೆಯ ಕ್ಯಾನ್ಸರ್ ರೋಗನಿರ್ಣಯವಾಗಿ, ಜೀವನದ ಅತಿ ದುರ್ಗಮ ದಿನಗಳನ್ನು ಅನುಭವಿಸಬೇಕಾಯಿತು. ಇವರ ಅತ್ಯಂತ ಸಕಾರಾತ್ಮಕ ಮತ್ತು ಧೃಢ ಮನಸ್ಸಿನಿಂದ ಗೆಲ್ಲುವ ಛಲ,  ಚಿಕಿತ್ಸೆ (ಟ್ರೀಟ್ಮೆಂಟ್) ಸಹಿಸಿಕೊಳ್ಳುವ ಶಕ್ತಿ ನೀಡಿ, ಪುನಃ ನಿತ್ಯ ಜೀವನಕ್ಕೆ ಮರಳಲು ಸಹಾಯವಾಯಿತು. ತರುವಾಯ ಇನ್ನಿತರರಿಗೆ ಸಹಾಯ ಮಾಡುವ ಇಚ್ಛೆಯಿಂದ ಕ್ಯಾನ್ಸರ್ ಸಹಾಯ ಗುಂಪನ್ನು ಸೇರಿ, ಕಳೆದ ೧೦ ವರುಷಗಳಿಂದ  ಹಲವಾರು ಹೊಸ  ಕಾರ್ಯಕ್ರಮಗಳನ್ನು ಯೋಜಿಸಿ, ನಡೆಸಿ,  ನೂರಾರು ಕ್ಯಾನ್ಸರ್ ರೋಗಿಗಳಿಗೆ ಸಂಪೂರ್ಣ ಸೇವೆ- ಸಹಾಯ ನೀಡಿ, ಅವರ ಹೊಸಜೀವನದ ಮಾರ್ಗದರ್ಶಿಗಳಾಗಿದ್ದರೆ.

<- ಹಿಂತಿರುಗಿ