ಮಹಿಳೆಯರಲ್ಲಿ ಕ್ಯಾನ್ಸರ್ – ಅರಿವು ಮತ್ತು ತಡೆಗಟ್ಟುವಿಕೆ – ವರದಿ

ಮಹಿಳೆಯರಲ್ಲಿ ಕ್ಯಾನ್ಸರ್ – ಅರಿವು ಮತ್ತು ತಡೆಗಟ್ಟುವಿಕೆ

14ನೇ ಮೇ 2022, 11:00 – 12:15 IST – ವೆಬಿನಾರ್

Dr. Niti Krishna Raizada

ಮಿತ್ರ ಕ್ಯಾನ್ಕೇರ್ ಫೌಂಡೇಶನ್ ಸಂಸ್ಥೆ, “ಮಹಿಳೆಯರಲ್ಲಿ ಕ್ಯಾನ್ಸರ್ – ಅರಿವು ಮತ್ತು ತಡೆಗಟ್ಟುವಿಕೆ” ವಿಷಯದ ಬಗ್ಗೆ, ಡಾಕ್ಟರ್ ನೀತಿ ಕೃಷ್ಣ ರೈಝಾದ, ಡೈರೆಕ್ಟರ್, ಮೆಡಿಕಲ್ ಒಂಕಾಲಜಿ, ಫೋರ್ಟಿಸ್ ಸಮೂಹ ಆಸ್ಪತ್ರೆ, ಇವರಿಂದ ಭಾಷಣ ಮಾತುಕತೆ ವೇಬಿನರ್ ಆಯೋಜಿಸಿದ್ದರು.

ಈ ವೇಬಿನರ್ ೧೪ ಮೇ ೨೦೨೨ರಂದು ೧೧೦೦ – ೧೨೧೫ ಘಂಟೆಯವರೆಗೆ ನಡೆಯಿತು. ಕಾರ್ಯಕ್ರಮದ ನಿರ್ವಹಣೆ ಸುಜಾತ ರಾಜಮಣಿ.

ಬಹಳಷ್ಟು ಮಹಿಳೆಯರು ಮತ್ತು ಮಹನೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತಮ್ಮ ಭಾಷಣದಲ್ಲಿ ಡಾಕ್ಟರ್ ನೀತಿ ವಿವಿಧ ವಿಷಯಗಳನ್ನು ಸಂಬೋಧಿಸಿ  ಅವುಗಳ ಬಗ್ಗೆ ಅರಿವು, ಚಿಕಿತ್ಸೆ ಇತ್ಯಾದಿಗಳ ಪರಿಚಯ ಮಾಡಿಕೊಟ್ಟರು. ಈ ಕೆಳಗಿನ ಬಗ್ಗೆ ವಿಶೇಷ ಗಮನ ನೀಡಬೇಕೆಂದು  ಒತ್ತಿ ಹೇಳಿದರು:

  •  ಕ್ಯಾನ್ಸರ್ ಘಟನೆ  ಪ್ರತಿ ವರ್ಷವೂ ಹೆಚ್ಚುತ್ತಿದೆ – ಅದೂ ಯುವಜನರಲ್ಲಿ ಮತ್ತು ಉತ್ಪಾದಕತೆ ಕಾರ್ಯಪಡೆಯಲ್ಲಿ ಹೆಚ್ಚುತ್ತಿರುವುದು ಒಂದು ಕಾಳಜಿಯ  ಪ್ರವೃತ್ತಿ.
  • ಮಹಿಳೆಯರಲ್ಲಿ ಕಾಣಿಬರುವ ಸಾಮಾನ್ಯ ಕ್ಯಾನ್ಸರ್ ಮಾದರಿಗಳು.
  • ಸೂಕ್ತ ಸಮಯದಲ್ಲಿ ತಡೆಗಟ್ಟುವಿಕೆ ವಿಧಾನಗಳು – ಲಸಿಕೆ ಒಳಗೊಂಡು ಮತ್ತು ಆಸ್ಪತ್ರೆಯಲ್ಲಿ / ಆಸ್ಪತ್ರೆಯ ಹೊರಗೆ ಪರೀಕ್ಷೆಗಳು, ಮನೆಯಲ್ಲಿ ಸ್ವಯಂ ಪರೀಕ್ಷೆ ಮಾಡಿಕೊಳ್ಳುವುದ ಇತ್ಯಾದಿ.
  • ಜೀವನಶೈಲಿ ಮತ್ತು ಕ್ಷೇಮಜೀವನದ ಮಹತ್ವ – ಸಲಹೆಗಳು ಮತ್ತು ತಂತ್ರಗಳು.

ಕಡೆಯಲ್ಲಿ ಭಾಗವಹಿಸುವವರ ಪ್ರಶ್ನೋತ್ತರ ಕಾರ್ಯಕ್ರಮವನ್ನು ಡಾಕ್ಟರ್ ಲತಾ ಆನಂದ್ ಅವರು ನಡೆಸಿಕೊಟ್ಟರು. ಡಾಕ್ಟರ್ ನೀತಿ ಪ್ರಶ್ನೆಗಳಿಗೆ ವಿವರವಾಗಿ ಸರಳ ಭಾಷೆಯಲ್ಲಿ ಸಮರ್ಪಕ ಉತ್ತರಗಳನ್ನು ನೀಡಿದರು.

ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿ ಕಾರ್ಯಕ್ರಮ ಮುಕ್ತಾಯವಾಯಿತು.