ಒಬ್ಬ ೩೫ ವರ್ಷದಿಂದ ಮಕ್ಕಳ ಡಾಕ್ಟರ್, ಸಮಾಜ ಸೇವೆಯಲ್ಲಿ ಹೃದಯ ಮತ್ತು ನಡತೆ

Dr. ಲತಾ ಆನಂದ್

<strong>Dr. ಲತಾ ಆನಂದ್</strong>
Dr. ಲತಾ ಆನಂದ್

ಎಂ. ಬಿ. ಬಿ. ಎಸ್., ಡಿ. ಪೆಡ್ , ಮಕ್ಕಳ ಸ್ಪೆಷಲಿಸ್ಟ್
– ಸೀನಿಯರ್ ಕನ್ಸಲ್ಟೆಂಟ್, ಅನನ್ಯ ಆಸ್ಪತ್ರೆ, ಬೆಂಗಳೂರು
– ೩೫ ವರ್ಷದಿಂದ ಮಕ್ಕಳ ಡಾಕ್ಟರ್

Dr. ಲತಾ ಆನಂದ್ ಬೆಂಗಳೂರಿನಲ್ಲಿ ನೆಲಸಿ ೩೫ಕ್ಕೂ ಹೆಚ್ಚು ವರುಷ ಮಕ್ಕಳ ಸ್ಪೆಷಲಿಸ್ಟ್ ಆಗಿದ್ದಾರೆ.
ಡಾಕ್ಟರ್ ಲತಾ ಅವರ ಎಂ. ಬಿ. ಬಿ. ಎಸ್. ಮತ್ತು ಪಿ ಜಿ ಡಿಪ್ಲೊಮಾ ಇನ್ ಪೀಡಿಯಾಟ್ರಿಕ್ ವಿಧ್ಯಾಭ್ಯಾಸ ಎರಡೂ ಅಹಮದಾಬಾದಿನ ಬಿ ಜೆ ಮೆಡಿಕಲ್ ಕಾಲೇಜು, ಅದರ ಜೊತೆಗೂಡಿರುವ ಸಿವಿಲ್ ಆಸ್ಪತ್ರೆ ಅಹಮದಾಬಾದ್ ( ಏಷ್ಯಾ ಖಂಡದಲ್ಲೇ ಒಂದು ದೊಡ್ಡ ಆಸ್ಪತ್ರೆ) ಯಲ್ಲಿ ನಡೆಯಿತು. ಇದರಿಂದಾಗಿ ಅವರಿಗೆ ಪ್ರತಿದಿನವೂ ಬಹಳಷ್ಟು ಮಂದಿ (ಸಮಾಜದ ಆರ್ಥಿಕ ಹಿಂದುಳಿದ) ರೋಗಿಗಳನ್ನು ಪರೀಕ್ಷಿಸಿ ಗುಣಮುಖ ಮಾಡುವ ಅವಕಾಶ ದೊರಕಿತು, ಸಹಾನುಭೂತಿ ಗುಣ ಜೊತೆಯ ಅನುಭವವೂ ಆಯಿತು.

ಸ್ನಾತಕೋತ್ತರ ಪದವಿ ಪಡೆದಮೇಲೆ, Dr ಲತಾ ಸ್ವಂತ ಖಾಸಗಿ ಮಕ್ಕಳ ಚಿಕಿತ್ಸಾಲಯ ಪ್ರಾರಂಭಿಸಿ ವೃತ್ತಿ ನಡೆಸುತ್ತಿದ್ದಾರೆ. ಇದರ ಜೊತೆಗೆ ಅನನ್ಯ ಆಸ್ಪತ್ರೆ, ಬೆಂಗಳೂರು ನಲ್ಲಿ ಸೀನಿಯರ್ ಕನ್ಸಲ್ಟೆಂಟ್ ಆಗಿ ರೋಗಿಗಳನ್ನು ಪರೀಕ್ಷಿಸುತ್ತಾರೆ.

Dr ಲತಾ ಕೆ. ಎಮ್. ಸಿ. ಯು ಸದಸ್ಯರಾಗಿದ್ದಾರೆ. Dr ಲತಾ , ೧೯೯೪ರಿಂದ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ ನ ಲೈಫ್ ಮೆಂಬರ್ ಆಗಿದ್ದಾರೆ ಅಕಾಡೆಮಿಯ ಅನೇಕ ಸಮ್ಮೇಳನ ಮತ್ತು ವೇಬಿನಾರ್ಗಳಲ್ಲಿ ಭಾಗವಹಿಸಿ , ಕ್ಯಾನ್ಸರ್ ಒಳಗೊಂಡು ವಿಷಯದ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳುತ್ತಾರೆ.

Dr ಲತಾ ಸಮಾಜ ಸೇವೆಗೆ ಬದ್ದವಾಗಿ, ಕ್ಯಾನ್ಸರ್ ರೋಗಿಗಳಿಗೆ ಬೇಕಾಗುವ ಸಮಗ್ರ ಸೇವೆಗಳ ಅಳವಡಿಕೆ ಮತ್ತು ಪೂರೈಕೆಯ ಗುರಿಯನ್ನು ಹೊಂದಿದ್ದಾರೆ.

<- ಹಿಂತಿರುಗಿ