ಕ್ಯಾನ್ಸರ್ ತಡೆಗಟ್ಟುವಿಕೆ- ತ್ವರಿತ ಸಲಹೆ ಮತ್ತು ತಂತ್ರಗಳು – ವರದಿ

ಕ್ಯಾನ್ಸರ್ ತಡೆಗಟ್ಟುವಿಕೆ- ತ್ವರಿತ ಸಲಹೆ ಮತ್ತು ತಂತ್ರಗಳು

ಶನಿವಾರ, ಜೂನ್ 18, 2022, 11:00 – 12:15

ಡಾಕ್ಟರ್ ತಪಸ್ವಿನಿ  ಪ್ರಧಾನ್

ಹಿರಿಯ ಕನ್ಸಲ್ಟೆಂಟ್ ಮತ್ತು ಕ್ಯಾನ್ಸರ್ ಸರ್ಜನ್ ( ತಲೆ ಮತ್ತು ಕತ್ತು) , ಅಪೋಲೋ ಇಂದ್ರಪ್ರಸ್ಥ ಆಸ್ಪತ್ರೆ, ಅಪೋಲೋ ನೋಯ್ಡಾ.

 ಮಿತ್ರ ಕ್ಯಾನಕೇರ್ ಫೌಂಡೇಶನ್ ಸಂಸ್ಥೆ, “ಕ್ಯಾನ್ಸರ್ ತಡೆಗಟ್ಟುವಿಕೆ- ತ್ವರಿತ ಸಲಹೆ ಮತ್ತು ತಂತ್ರಗಳು” ವಿಷಯದ ಬಗ್ಗೆ ಡಾಕ್ಟರ್ ತಪಸ್ವಿನಿ ಪ್ರಧಾನ್ ಹಿರಿಯ ಕನ್ಸಲ್ಟೆಂಟ್ ಮತ್ತು ಕ್ಯಾನ್ಸರ್ ಸರ್ಜನ್ (ತಲೆ ಮತ್ತು ಕತ್ತು) , ಅಪೋಲೋ ಇಂದ್ರಪ್ರಸ್ಥ ಆಸ್ಪತ್ರೆ, ಅಪೋಲೋ ನೋಯ್ಡಾ, ಇವರಿಂದ ವೇಬಿನರ್ ಆಯೋಜಿಸಿದ್ದರು.

ಈ ವೇಬಿನರ್  ಶನಿವಾರ, ಜೂನ್ ೧೮, ೨೦೨೨  ರಂದು ನಡೆಯಿತು. ಕಾರ್ಯಕ್ರಮದ  ನಿರ್ವಹಣೆಯನ್ನು ಮಿತ್ರ ಕ್ಯಾನಕೇರ್ ಫೌಂಡೇಶನ್ ಸಂಸ್ಥೆಯ ಸುಜಾತ ಸಾಹು ಮಾಡಿದರು.

ಬಹಳಷ್ಟು ಮಹಿಳೆಯರು ಮತ್ತು ಮಹನೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.     ಅವರ ಭಾಷಣದಲ್ಲಿ, ಡಾಕ್ಟರ್ ತಪಸ್ವಿನಿ ಪ್ರಧಾನ್ ಕ್ಯಾನ್ಸರ್ ಮತ್ತು ಅದರ ಶೀಘ್ರ ಹರಡುವಿಕೆಯ ಬಗ್ಗೆ  ಸೂಕ್ಷ್ಮ ಪೀಠಿಕೆ ನೀಡಿದರು.

ಅವರ ಭಾಷಣದ ಮುಖ್ಯ ಉದ್ದೇಶವಾಗಿ ಕ್ಯಾನ್ಸರ್ ಆಗುವ ಸಂದರ್ಭಗಳ ತಡೆಗಟ್ಟುವಿಕೆ – 

ತ್ವರಿತ ಸಲಹೆ ಮತ್ತು ತಂತ್ರಗಳ  ನಿತ್ಯಜೀವನದಲ್ಲಿ ಉಪಯೋಗ.

ನಿತ್ಯಜೀವಶೈಲಿಯಲ್ಲಿ ಕ್ಯಾನ್ಸರ್ ಆಗುವ ಸಂಭವಗಳು ಹೀಗಿವೆ:

  •  ಹೆಚ್ಚು ಬಿ. ಎಂ. ಐ.
  • ತರಕಾರಿ ಮತ್ತು ಹಣ್ಣುಗಳ ಕಡಿಮೆ ಸೇವನೆ
  • ಶಾರೀರಿಕ ಚಟುವಟಿಕೆಗಳಲ್ಲಿ ಕೊರತೆ
  • ದೇಹಕ್ಕೆ ಹಾನಿಕರವಾದ ಪದಾರ್ಥಗಳ ಸೇವನೆ ಉ. ದಾ. ತಂಬಾಕು ಮತ್ತು ಮದ್ಯ

ಕ್ಯಾನ್ಸರ್  ತಡೆಯಲು ಒಳ್ಳೆಯ ಅಭ್ಯಾಸವೇನಂದರೆ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಮತ್ತು ತಂಬಾಕು ಸೇವನೆಯನ್ನು ವರ್ಜಿಸುವುದು (ನಿಷ್ಕ್ರಿಯ ಧೂಮಪಾನ ಸೇರಿ) 

ತ್ವರಿತ ಸಲಹೆ ಮತ್ತು ತಂತ್ರಗಳು :

  • ತಂಬಾಕು ಸೇವನೆಯ ಅಭ್ಯಾಸವನ್ನು ಆರಂಭ ಮಾಡಬೇಡಿ ಯಾಕೆಂದರೆ ಆದು ಚಟವಾಗಿ ಮೂರು D ( ಡಿಸೀಸ್ – ಖಾಯಿಲೆ, ಡೆತ್ – ಮರಣ, ದಿಸಬಿಲಿಟಿ- ಅಂಗವಿಕಲತೆ) ಯ ಕಡೆ ಒಯ್ಯುತ್ತದೆ; ವಿಶೇಷವಾಗಿ ಯುವಜನರಿಗೆ ಸಲಹೆ.
  • ವೈರಲ್ ಸೋಂಕಿನಿಂದ ( ಇನ್ಫೆಕ್ಷನ್) ಮುಂಜಾಗ್ರತೆ ವಹಿಸಿ ( ಹೆಚ್. ಪಿ. ವಿ., ಈ. ಬಿ. ವಿ., ಹೆಚ್. ಐ. ವಿ. , ಹರ್ಪಿಸ್). ಈ ವೈರಲ್ ಸೋಂಕುಗಳು ವಿವಿಧ ತರಹದ ಕ್ಯಾನ್ಸರ್ ಗಳನ್ನು ಪ್ರಚೋದಿಸುತ್ತವೆ ಎಂದು ಗೊತ್ತಾಗಿದೆ.  ಸರ್ವಿಕಲ್ ಮತ್ತು ಹೆಪಟೈಟಿಸ್  ಏ ಮತ್ತು ಬಿ ವ್ಯಾಕ್ಸೀನ್ ಲಭ್ಯವಿದೆ.
  • ಪ್ರತಿನಿತ್ಯ ಇಪ್ಪತ್ತು (೨೦) ನಿಮಿಷ ಸೂರ್ಯನ ಕಿರಣಗಳಿಗೆ ದೇಹದ ಶೇಕಡಾ ೪೦ರಷ್ಟು ಭಾಗವನ್ನು ತೆರೆದುಕೊಳ್ಳುವುದು ಉತ್ತಮ. ಆದರೆ, ಸೂರ್ಯನ ಅಲ್ಟ್ರಾ ವಯಲೆಟ್ ಕಿರಣಗಳಿಗೆ (ಓಝೋನ್ ಕೊರತೆಯಿರುವ ಮತ್ತು ಹೆಚ್ಚು ಎತ್ತರ ಇರುವ ಪ್ರದೇಶಗಳಲ್ಲಿ)  ತೀವ್ರ ಒಡ್ಡುವಿಕೆ ತಪ್ಪಿಸಿ, ಯಾಕೆಂದರೆ ಅದರಿಂದ ಚರ್ಮದ ಕ್ಯಾನ್ಸರ್ ಆಗಬಹುದು.
  • ಪೋಷಣೆಯ ಆಹಾರ – “ಕಾಮನ ಬಿಲ್ಲನ್ನು ತಿನ್ನಿರಿ” ಅಂದರೆ ಕಾಮನ ಬಿಲ್ಲಿನಲ್ಲಿರುವಂತ ಬಣ್ಣ ಬಣ್ಣದ ತರಕಾರಿ ಮತ್ತು ಹಣ್ಣುಗಳು ವಿವಿಧ ಪೋಷಣಕಾರಿ ಸತ್ವಗಳನ್ನು ಒಳಗೊಂಡು ಆರೋಗ್ಯಕರ  ಊಟವಾಗುತ್ತದೆ.   ರಾಸಾಯನಿಕ ಮತ್ತು ಕೀಟನಾಶಕ ದ್ರವ್ಯಗಳನ್ನು ತೆಗೆಯಲು ತರಕಾರಿ ಹಣ್ಣುಗಳನ್ನು ಚೆನ್ನಾಗಿ ತೊಳೆಯಿರಿ. ದಿನಕ್ಕೆ ೫ ಬಾರಿ ಹಣ್ಣುಗಳನ್ನು ಸೇವಿಸಬೇಕು.
  • ಗೊತ್ತಿರುವ/ ದಿನೋಪಯೋಗಿ  ಮಸಾಲೆ, ತರಕಾರಿ ಮತ್ತು ಹಣ್ಣುಗಳಿಂದ ಕ್ಯಾನ್ಸರ್ ತಡೆಗಟ್ಟುವುದು – ಅರಿಶಿನ ಕರ್ಕ್ಯುಮಿನ್ ನ ಸರ್ವೋತ್ತಮ ಮೂಲ. ಟೊಮೇಟೊ, ಕ್ಯಾಪ್ಸಿಕಂ, ಕಲ್ಲಂಗಡಿ ಹಣ್ಣು, ಸಿಪ್ಪೆ ಯೊಡನೆ ಆ್ಯಪಲ್ ಇವೆಲ್ಲವೂ ಲೈಕೊ ಪ್ರೀನ್ ನ ಒಳ್ಳೆಯ ಮೂಲ.  ಹಸಿರು ಚಹಾ ಈ. ಜಿ. ಸಿ. ಜಿ. ಕೊಡುತ್ತದೆ. ಬೀನ್ಸ್, ಪಪಾಯ, ಕಡಲೆಕಾಯಿ, ಬಾದಾಮಿ ಎಲ್ಲವೂ ಫಾಲಿಕ್ ಆಸಿಡ್ ನೀಡುತ್ತವೆ.
  • ದೈಹಿಕ ಚಟುವಟಿಕೆ ಮತ್ತು ದೈಹಿಕ ಆರೋಗ್ಯವನ್ನು ನಿರ್ವಹಿಸಿ. ಪ್ರತಿದಿನವೂ ೩೦ ನಿಮಿಷಗಳ ವ್ಯಾಯಾಮ ಮಾಡಿಕೊಂಡು ದೇಹದ ಬಿ. ಎಂ. ಐ. ೧೮ ರಿಂದ ೨೦ ರ ಒಳಗಿಡಿ. ಮೊದಲ ೨೦ ನಿಮಿಷದ ವ್ಯಾಯಾಮ ಕಾರ್ಬೋ – ಹೈಡ್ರೇಟ್ ಕಳೆದುಕೊಳ್ಳಲು ನಂತರದ ಸಮಯ ಬೊಜ್ಜು ಇಳಿಸಲು ಸಹಾಯವಾಗುತ್ತದೆ.
  • ದೈಹಿಕ ಮತ್ತು ಮಾನಸಿಕ ಕ್ಷೇಮಕ್ಕೆ ಯೋಗ. ಯೋಗ,  ಸಮತೋಲನದ ವ್ಯಾಯಾಮ ಮಾಂಸಖಂಡಗಳಿಗೆ ಮತ್ತು ಮೂಳೆಗಳಿಗೆ ನೀಡುತ್ತದೆ, ಹಾಗೂ ಶ್ವಾಸಕೋಶ ವನ್ನು ಆರೋಗ್ಯಕರವಾಗಿ ಇಡುತ್ತದೆ.  ಯೋಗ ಕ್ಯಾನ್ಸರ್ ಚಿಕಿತ್ಸೆ ನೀಡಲಾರದು. ಆದರೆ ಜೀವನದ ಗುಣವನ್ನು ಉತ್ತಮ ಪಡಿಸುತ್ತದೆ. ಯೋಗ ನಿದ್ರೆಯನ್ನು ಉತ್ತಮಗೊಳಿಸುತ್ತದೆ, ಒತ್ತಡಕ್ಕೆ ಪರಿಹಾರ ನೀಡುತ್ತದೆ, ಹಾಗೂ ದೇಹದ ಪ್ರತಿರಕ್ಷಣೆಯನ್ನು ಸುಧಾರಿಸುತ್ತದೆ.
  • ದೇಹ ಮುಂಚಿತವಾಗಿ ಕೊಡುವ  ಚಿಹ್ನೆಗಳನ್ನು ನಿರ್ಲಕ್ಷಿಸಿಬೇಡಿ – ಗೆಡ್ಡೆಗಳು, ಕರುಳಿನ ಪ್ರವೃತ್ತಿಯಲ್ಲಿ ಬದಲಾವಣೆ,  ೩ ವಾರವಾದರೂ ಸರಿಹೋಗದ ಗಾಯ, ಇವೆಲ್ಲವೂ  ಎಚ್ಚರಿಕೆಯ ಸಂಕೇತಗಳಾಗಿದ್ದು ನಿರ್ಲಕ್ಷ ಮಾಡಬಾರದು. ಕ್ಯಾನ್ಸರ್ ಆಗುವ ಸಾಧ್ಯತೆಗಳನ್ನು ತಳ್ಳಿ ಹಾಕಲು,  ಸ್ಪೆಷಲಿಸ್ಟ್ ಡಾಕ್ಟರ್ ಸಲಹೆ ಕೂಡಲೇ ಪಡೆಯುವುದು ಉತ್ತಮ.

ಭಾಷಣದ ನಂತರ ಶ್ರೋತೃಗಳು ಸಲ್ಲಿಸಿದ್ದ ಪ್ರಶ್ನೆಗಳನ್ನು ಉತ್ತರಿಸುವ ಕಾರ್ಯಕ್ರಮವನ್ನು, ಮಿತ್ರ ಕ್ಯಾನಕೇರ್ ಫೌಂಡೇಶನ್ ಸಂಸ್ಥೆಯ ಸುಜಾತ ಸಾಹು ಅವರು ನಿರ್ವಹಿಸಿದರು. ಕೊನೆಯಲ್ಲಿ  ಕಾರ್ಯಕ್ರಮದ ಮುಖ್ಯ ಅಂಶಗಳನ್ನು  ಮಿತ್ರ ಕ್ಯಾನ್ಕೇರ್ ಸಂಸ್ಥೆಯ ಜಂಟಿ ಸ್ಥಾಪಕರಾದ ಡಾಕ್ಟರ್ ಲತಾ ಆನಂದ್  ಉಲ್ಲೇಖಿಸಿದರು.

ಭಾಗವಹಿಸಿದವರು ಮಾಹಿತಿಗಳು ಒಳಂಗೊಡ,  ಸ್ಪಷ್ಟವಾಗಿ ಪ್ರಸ್ತುತ ಪಡಿಸಿದ, ಮತ್ತು ಸಂಶಯಗಳನ್ನು ನಿವಾರಿಸಿದ  ಕಾರ್ಯಕ್ರಮ  ಇದೆಂದರು. ಮಿತ್ರ ಕ್ಯಾನ್ಕೇರ್ ಸಂಸ್ಥೆಯ ಜಂಟಿ ಸ್ಥಾಪಕರಾದ  ಅಮರ್ ಭಾಸ್ಕರ್ ಡಾಕ್ಟರ್ ತಪಸ್ವಿನಿ ಪ್ರಧಾನ್ ಅವರಿಗೆ   ಸಂಸ್ಥೆಯ ಪರವಾಗಿ   ಈ ಮಾಸಿಕ ಅರಿವಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಮಯ ಮಾಡಿಕೊಂಡ ಅವಕಾಶಕ್ಕೆ ಹುತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.

——————————————————

* ಇರಬಹುದಾದ ಲಕ್ಷಣಗಳು – ಮೂಲ – ವರ್ಲ್ಡ್ ಹೆಲ್ತ್  ಸಂಸ್ಥೆ

** ಲಕ್ಷಣಗಳು- ಮಿತ್ರ ಕ್ಯಾನ್ಕೇರ್ ಸಂಸ್ಥೆಯು ಸಾಮಾನ್ಯ ತರಹದ ಕ್ಯಾನ್ಸರ್ ಆಗುವ ಲಕ್ಷಣಗಳ ಪಟ್ಟಿಯನ್ನು ತಯಾರಿಸಿದೆ – ಸುಲಭ ಮತ್ತು ಚಿತ್ರಗಳನ್ನು ಒಳಗೊಂಡ  ಕ್ಯಾನ್ಸರ್ ಮಾಹಿತಿಯನ್ನು, ಕನ್ನಡದಲ್ಲಿ ಪಡೆಯಲು, ಮಿತ್ರ ಕ್ಯಾನ್ಕೇರ್ ಸಂಸ್ಥೆಯ ವೆಬ್ ಸೈಟ್ ಸಾಮಾನ್ಯ ಕ್ಯಾನ್ಸರ್ ಮತ್ತು ರೋಗಲಕ್ಷಣಗಳು  ನೋಡಿ.  ಮುಖಪುಟದಲ್ಲಿ ( ಹೋಂ ಪೇಜ್ ನಲ್ಲಿ) ಕನ್ನಡ ಭಾಷೆ ಆರಿಸಿಕೊಳ್ಳಿ..