ಕಲಿಸುವ ಉತ್ಸಾಹ ಹೊಂದಿರುವ ಒಬ್ಬ ನಿಪುಣ ಆಂಕೊಲಾಜಿ ಸರ್ಜನ್

Dr. ತಪಸ್ವಿನಿ ಪ್ರಧಾನ್

Dr. ತಪಸ್ವಿನಿ ಪ್ರಧಾನ್
Dr. ತಪಸ್ವಿನಿ ಪ್ರಧಾನ್

ಎಂ. ಬಿ. ಬಿ. ಎಸ್., ಎಂ. ಎಸ್. (ಈ. ಏನ್. ಟಿ.), ಡಿ. ನ್. ಬಿ. ( ತಲೆ ಮತ್ತು ಕತ್ತು ಒಂಕೋರ್ಸರ್ಜರಿ) 
– ಹಿರಿಯ ಕನ್ಸಲ್ಟೆಂಟ್ ಮತ್ತು ಕ್ಯಾನ್ಸರ್ ಸರ್ಜನ್ ( ತಲೆ ಮತ್ತು ಕತ್ತು) , ಅಪೋಲೋ ಇಂದ್ರಪ್ರಸ್ಥ ಆಸ್ಪತ್ರೆ, ಅಪೋಲೋ ನೋಯ್ಡಾ

ಡಾಕ್ಟರ್ ತಪಸ್ವಿನಿ ಅವರು ತಮ್ಮ ಎಂ. ಬಿ. ಬಿ. ಎಸ್   ಪದವಿಯನ್ನು  ಮೌಲಾನಾ ಆಜಾದ್ ಮೆಡಿಕಲ್ ಕಾಲೇಜ್, ನವ ದೆಹಲಿ ಮತ್ತು  ಎಂ. ಎಸ್. (ಈ. ಏನ್. ಟಿ.) ಸ್ನಾತಕೋತ್ತರ ಪದವಿಯನ್ನು ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜಿನಿಂದ ಪಡೆದಿದ್ದಾರೆ. ಅವರಿಗೆ ನವದೆಹಲಿಯಲ್ಲಿರುವ ಅಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಲ್ಲಿ ತಲೆ ಮತ್ತು ಕತ್ತು ಸರ್ಜನ್ ತರಬೇತಿ  

ಆಗಿದೆ.  ಸಧ್ಯಕ್ಕೆ ಅಪೋಲೋ ಇಂದ್ರಪ್ರಸ್ಥ ಆಸ್ಪತ್ರೆ, ಅಪೋಲೋ ನೋಯ್ಡಾ ಆಸ್ಪತ್ರೆಯಲ್ಲಿ ಹಿರಿಯ ಕನ್ಸಲ್ಟೆಂಟ್ ಮತ್ತು ಕ್ಯಾನ್ಸರ್ ಸರ್ಜನ್ ( ತಲೆ ಮತ್ತು ಕತ್ತು) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೆ ಪೂರ್ವ ಫೋರ್ಟಿಸ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್, ರಾಜೀವ್ ಗಾಂಧಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್, ಬಿ ಎಲ್ ಕಪೂರ್ ಆಸ್ಪತ್ರೆಗಳಲ್ಲಿ  ಹಲವಾರು ವರ್ಷ ಕೆಲಸ ಮಾಡಿದ್ದಾರೆ.

ಡಾಕ್ಟರ್ ತಪಸ್ವಿನಿ ಅವರು ಈ ಕೆಳಗಿನ ಉನ್ನತ ತರಬೇತಿಗಳ ಪರಿಚಯ ಮಾಡಿಕೊಂಡಿದ್ದಾರೆ : ಲೇಸರ್ ಉಪಯೋಗ ಯೂನಿವರ್ಸಿಟಿ ಆಫ್ ಜಿನೋವಾ, ಟ್ರಾನ್ಸ್ ಒರಲ್ ರೊಬೋಟಿಕ್ ಸರ್ಜರಿ ಸ್ತ್ರಸ್ಬರ್ಗ್ ನಲ್ಲಿ, ಎಂಡೊಸ್ಕೋಪಿಕ್ ಸ್ಕಲ್ ಬೇಸ್ ಸರ್ಜರಿ ಪಿಟ್ಸ್ಬರ್ಗ್ನನಿಂದ. ಇವರು ಟ್ರಾನ್ಸ್ ಓರಲ್ ಲೇಸರ್ ಮೈಕ್ರೋ ಲ್ಲಾರಿಂಜಿಯಲ್ ಸರ್ಜರಿಯ ನುರಿತ ತಜ್ಞರು.

ಕ್ಲಿನಿಕಲ್ ಕೆಲಸವಲ್ಲದೇ ಡಾಕ್ಟರ್ ತಪಸ್ವಿನಿ ಅವರು ಕಲಿಸುವುದರಲ್ಲಿ ಬಹಳ ಆಸಕ್ತಿ ಹೊಂದಿದ್ದಾರೆ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ  ಸರ್ಜಿಕಲ್ ಒಂಕಾಲಜಿ ಯಲ್ಲಿ ತಮ್ಮ ಇನ್ಸ್ಟಿಟ್ಯೂಟ್ ನಲ್ಲಿ ತರಬೇತಿ ನೀಡುತ್ತಾರೆ. ಇವರು ಅಥ್ಯಾಸಕ್ತಿಯ ವಾಗ್ಮಿಯೂ ಉಂಟು- ಸಾರ್ವಜನಿಕರಿಗೆ ,ಅದರಲ್ಲೂ ಮಕ್ಕಳು ಮತ್ತು ಯುವಪೀಳಿಗೆ,  ತಂಬಾಕು ಸೇವನೆಯ ಹಾನಿದಾರಕ ಪರಿಣಾಮಗಳ ಬಗ್ಗೆ , ಕ್ಯಾನ್ಸರ್ ರೋಗದ ಅರಿವು ಮತ್ತು ತಡೆಗಟ್ಟುವಿಕೆ, ಇವೆಲ್ಲರ ಪ್ರಚಾರ ಮಾಡುತ್ತಿರುವರು.   ಕ್ಯಾನ್ಸರ್ ರೋಗದ ಸಮಗ್ರ ಚಿಕಿತ್ಸೆಯ ರೀತಿಯನ್ನು ಹಮ್ಮಿಕೊಂಡು ಇವರು ಸರ್ಜರಿಯ ಜೊತೆಗೆ ರೋಗಿಗಳ  ಮತ್ತು ಅವರ ಬಂಧುಗಳ ಮಾನಸಿಕ ಬೆಂಬಲದ ಕಡೆಗೆ ಗಮನ ನೀಡುವುದು ಹೌದು.

ಇವರು ಟಿ. ವಿ. ಮತ್ತು ಎ.ಐ.ಆರ್. ನ ಹಲವರು ಕಾರ್ಯಕ್ರಮಗಳಲ್ಲಿ ಆಹ್ವಾನಿತ ಸ್ಪೀಕರ್ ಆಗಿದ್ದಾರೆ. “ಡಾಕ್ಟರ್ ತಪಸ್ವಿನಿ ಕಾರ್ನರ್”  ಎಂಬ ಕ್ಯಾನ್ಸರ್ ತಜ್ಞರ ಮತ್ತು ಕ್ಯಾನ್ಸರ್ ವಿಜೇತರ ಜೊತೆ  ನಿಯಮಿತ ಸಂದರ್ಶನ ಕಾರ್ಯಕ್ರಮ,  ಎ.ಐ.ಆರ್. ಆಶ್ರಯದಲ್ಲಿ ನಡೆಸಿಕೊಡುತ್ತಾರೆ.

ಹಲವಾರು ದೇಶ- ವಿದೇಶದ ಸಮ್ಮೇಳನಗಳಲ್ಲಿ ತಲೆ  ಮತ್ತು ಕತ್ತು ಸರ್ಜರಿಯ ಅಧ್ಯಾಪಕರಾಗಿ  ಭಾಗಿಯಾಗಿ,  ಪದಕಗಳನ್ನು ಪಡೆದ ಶ್ರೇಣಿ ಇವರದು.

ಡಾಕ್ಟರ್ ತಪಸ್ವಿನಿಯವರಿಗೆ ಸಂಗೀತ ಮತ್ತು ಕುಶಲ ಕಲೆಯಲ್ಲಿ ಆಸಕ್ತಿ ಇದೆ. ಬಹುಮುಖ ಖ್ಯಾತಿ.  ಹಿಂದುಸ್ತಾನಿ ಶಾಸ್ತ್ರೀಯ ಗಾಯನದಲ್ಲಿ ನಿಪುಣತೆಯಲ್ಲದೇ, ಇವರು ಸಿತಾರ್ ವಾದಕರು ಮತ್ತು ಪ್ರಶಸ್ತಿಗಳಿತ ವರ್ಣಚಿತ್ರಕಾರರೂ  ಆಗಿದ್ದಾರೆ.

<- ಹಿಂತಿರುಗಿ