ಕ್ಯಾನ್ಸರ್ನ ಸಾಮಾನ್ಯ ರೂಪಗಳು ಮತ್ತು ರೋಗಲಕ್ಷಣಗಳು

ಸಾಮಾನ್ಯ ಕ್ಯಾನ್ಸರ್ಗಳು

ಕ್ಯಾನ್ಸರ್ ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳ ( ಅಭಿವೃದ್ಧಿ ಯಾಗ) ಬಹುದು. ನೂರಕ್ಕೂ ಹೆಚ್ಚು ತರಹದ ಕ್ಯಾನ್ಸರ್ ಗಳು ಇವೆ.  ಕ್ಯಾನ್ಸರ್ ದೇಹದ  ಜೀವಕೋಶಗಳನ್ನು  ಸ್ಪರ್ಶಿಸುತ್ತದೆ. ದೇಹದಲ್ಲಿ ಜೀವಕೋಶಗಳು ನಿರಂತರವಾಗಿ ಹುಟ್ಟುತ್ತವೆ ಮತ್ತು ಸಾಯುತ್ತವೆ. ಸತ್ತ ಜೀವಕೋಶಗಳನ್ನು ಹೊಸ ಜೀವಕೋಶ  ಬದಲಿಸುತ್ತದೆ . ಒಮ್ಮೊಮ್ಮೆ ಈ ಪ್ರಕೃತಿಯನ್ನು ಒಡೆದು ಬದಲಾವಣೆ ಆಗಿ ಜೀವಕೋಶಗಳು ಅಧಿಕ ಮಾತ್ರದಲ್ಲಿ ದೇಹದ ಒಂದು ಭಾಗದಲ್ಲಿ ಬೆಳೆಯುತ್ತಾ ಹೋಗುತ್ತವೆ. ಇದು ಗೆಡ್ಡೆಯಾಗಿ ಕಾಣಿಸಿಕೊಳ್ಳುತ್ತದೆ. ಬಹುಪಾಲು ಗೆಡ್ಡೆಗಳು ಸೌಮ್ಯವಾಗಿ ಕ್ಯಾನ್ಸರ್ ಆಗುವುದಿಲ್ಲ. ಆದರೆ ಇತರೆ ಗೆಡ್ಡೆಗಳು ಬೆಳೆದು, ಮಾರಣಾಂತಿಕ ಆಗಿ,  ದೇಹದ ಬೇರೆ ಪ್ರದೇಶಗಳಿಗೂ ಹರಡಬಹುದು ( ಕ್ಯಾನ್ಸರ್)

ಕ್ಯಾನ್ಸರ್ ನ ಸಾಮಾನ್ಯ ಲಕ್ಷಣಗಳು

ಕೆಳಗಿರುವ ಎರಡು ಚಿತ್ರಗಳಲ್ಲಿ ಹದಿನೆಂಟು (೧೮) ಸಾಮಾನ್ಯ ಲಕ್ಷಣಗಳು ಮತ್ತು  ಚಿಹ್ನೆಗಳನ್ನು ತೋರಿಸಲಾಗಿದೆ.  ಈ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪರಿಶೀಲನೆ ಮಾಡಿಸುವುದು ಉತ್ತಮ.

ತೀವ್ರ ಮತ್ತು ಹೋಗಲಾರದ ಆಯಾಸ

೫ ಕಿಲೋ ತೂಕ  ಹೆಚ್ಚು/ ಕಡಿಮೆಯಾಗುವುದು

ಕಾರಣವಿಲ್ಲದೆ ವಾಂತಿ/ ವಾಕರಿಕೆ

ಚರ್ಮದ ಕೆಳಗೆ ಎಲ್ಲಿಯಾದರೂ ಗೆಡ್ಡೆ ಅಥವಾ ದಪ್ಪನಾಗಿರುವುದು

ಕಾರಣವಿಲ್ಲದೆ ಅನೀಮಿಯಾ

ಊಟಕ್ಕೆ ತೊಂದರೆ

೩ ವಾರವಾದರೂ ಸರಿಹೋಗದ ಗಾಯ

ಯಾವ ತರಹದಾದರೂ ರಕ್ತಸ್ರಾವ, ಕಾರಣವಿಲ್ಲದೆ

ಯಾವಾಗಲೂ ಕೆಮ್ಮು, ೩ ವಾರವಾದರೂ ಹೋಗದ

ಮೂತ್ರದ ತೊಂದರೆ – ಬದಲಾವಣೆ  ಪ್ರಮಾಣ / ಆವರ್ತನದಲ್ಲಿ ( ಫ್ರಿಕ್ವೆನ್ಸಿ);  ಇಲ್ಲವೇ ರಕ್ತ ಮೂತ್ರದಲ್ಲಿ

ಬದಲಾವಣೆ ಮಚ್ಚೆಯ ಗಾತ್ರ ಅಥವ ಆಕಾರದಲ್ಲಿ

ಬದಲಾಗಿದ ಕರುಳಿನ ಅಭ್ಯಾಸಗಳು- ಮಲಬದ್ಧತೆ, ಅತಿಸಾರ ( diarrhoea)

ತಲೆನೋವು – ತೀವ್ರ / ನಿರಂತರ, ವಾಂತಿಕೂಡಿ/ಇಲ್ಲದೆ

ಬೆನ್ನು ನೋವು, ಮೂಳೆಯ ನೋವು

ಮೆನೋಪಾಸ್ ಆದಮೇಲೆ ರಕ್ತಸ್ರಾವ

ಪದೇಪದೇ ಜ್ವರ /   ಸೋಂಕು (ಇನ್ಫೆಕ್ಷನ್),  ವಿಶೇಷವಾಗಿ ಮಕ್ಕಳಲ್ಲಿ

ಮಾತಿನಲ್ಲಿ ಬದಲಾವಣೆ ಮತ್ತು/ ಅಥವ ನುಂಗುವುದರಲ್ಲಿ ತೊಂದರೆ

ಸ್ತನ ಅಥವ  ತೋಳಿನ ಕೆಳಗೆ ಗೆಡ್ಡೆ, ಮೊಲೆತೊಟ್ಟಿನಿಂದ ಸೋರುವುದು

ಸಾಮಾನ್ಯ ಕ್ಯಾನ್ಸರ್ಗಳು

Click on the thumbnails to know more…

ಬಾಲ್ಯದ ಕ್ಯಾನ್ಸರ್.