ಮಿತ್ರ ಕ್ಯಾನ್‌ಕೇರ್ ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ

ಮಿತ್ರಾ ಕ್ಯಾನ್‌ಕೇರ್ ಪ್ರಾರಂಭಿಸಿದೆ

ಅವರ ಬಹು-ಭಾಷಾ ವೆಬ್‌ಸೈಟ್

Tue, July 4, 2022, 05:00PM IST

ವೆಬ್‌ಸೈಟ್ ಬಿಡುಗಡೆಗೆ ಹಲವರು ಭಾಗವಹಿಸಿದ್ದರು…

ಜುಲೈ ೪ ರಂದು ನಮ್ಮ ಮಿತ್ರ ಕ್ಯಾನ್ಕೇರ್ ಫೌಂಡೇಶನ್ ಸಂಸ್ಥಯ, ವೆಬ್ಸೈಟ್ (ಮಾಹಿತಿ ಪಡೆಯುವ ಸ್ಥಳ), ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಸೌಲಭ್ಯಉಳ್ಳ , www.mitracancare.org ನ  ಅದ್ದೂರಿಯ ಉದ್ಘಾಟನಾ ಸಮಾರಂಭ  ನಡೆಯಿತು.  ನಮ್ಮ ಗುರಿಯಾದ  ಜನ ಕೇಂದ್ರಿತ ಸೇವೆಗಳು ಮತ್ತು ತಂತ್ರಜ್ಞಾನದ ಬಳಕೆಯನ್ನು ಗಮನದಲ್ಲಿಟ್ಟುಕೊಂಡು, ನಾವು ಈ ವೆಬ್ಸೈಟ್ ಅನ್ನು ಏಕಕಾಲದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಲಭ್ಯವಾಗುವಂತೆ  ಒದಗಿಸಿದ್ದೇವೆ. ಕೋಟ್ಯಾಂತರ ಕನ್ನಡ ಭಾಷೆ ಮಾತ್ರ ಅವಲಂಬಿಸಿರುವ ಜನತೆಗೆ ಕ್ಯಾನ್ಸರ್ ಅರಿವು ಮತ್ತು ತಡೆಗಟ್ಟುವಿಕೆ ಹಾಗೂ ವೈದ್ಯಕೀಯೇತರ ಸೇವೆಗಳ ಬಗ್ಗೆ ಸೂಕ್ತ ಮಾಹಿತಿ ದೊರೆಯುವ ಅವಕಾಶ ಈಗಾಗಿದೆ.

Dr ರವಿ ದೇವ್ ಮತ್ತು Dr ಬೆಳ್ಳಿಯಪ್ಪ ಎಂ. ಎಸ್, ಪ್ರಸಿದ್ಧ ಒಂಕಾಲಜಿ ಸ್ಪೆಷಲಿಸ್ಟ್ (ತಜ್ನರು), ಮಿತ್ರ ಕ್ಯಾನ್ಕೇರ್ ಫೌಂಡೇಶನ್ ಸಂಸ್ಥಯ  ಗೌರವ ಮಾರ್ಗದರ್ಶಕ ಸಮಿತಿಯ ಸದಸ್ಯರು, ವೆಬ್ಸೈಟ್  ಉದ್ಘಾಟಿಸಿದರು.  ತಮ್ಮ ಭಾಷಣದಲ್ಲಿ  “ತಡೆಗಟ್ಟುವಿಕೆ ರೋಗ ನಿವಾರಣೆಗಿಂತ  ಉತ್ತಮ”  ಹಾಗೂ “ಕ್ಯಾನ್ಸರ್ ಬಗ್ಗೆ ಸಮಾಜದಲ್ಲಿ  ಸೂಕ್ತ ಅರಿವು ಮೂಡಿಸುವುದು”  ಇವುಗಳ ಮಹತ್ವವನ್ನು ಒತ್ತಿ ಹೇಳಿದರು.   ಈ ಸಮಾರಂಭದಲ್ಲಿ ಅವರ ಉಪಸ್ಥಿತಿಗೆ   ಮತ್ತು ಅವರ  ಹಾಗೂ ಎಲ್ಲಾ   ಗೌರವ ಮಾರ್ಗದರ್ಶಕ ಸಮಿತಿಯ ಸದಸ್ಯರ ಪ್ರೇರಣದಾಯಕ ಬೆಂಬಲಕ್ಕೆ ನಮ್ಮ ಕೃತಜ್ಞತಾಪೂರ್ವಕ ವಂದನೆಗಳು.