ಮಹಿಳೆಯರು & ಮಹಿಳೆಯರು – ವರದಿ

ಮಹಿಳೆಯರು

&

ಮಹಿಳೆಯರು

ಶನಿವಾರ, ಸೆಪ್ಟೆಂಬರ್ 17, 2022, 11:00 – 12:15 IST

MBBS, MS (Obs & Gyn), FRCOG (UK), Fellowship in Gynae-Oncology (Singapore), Fellowship in Gynae-Oncology & Robotic Surgery (Hong Kong), Diploma in Gynaecological Operative Endoscopy (France)

Dr. Rani Bhat

Head & Senior Consultant – Division of Gynaecological Oncology, Apollo Hospitals, Bangalore.

ಮಿತ್ರ ಕ್ಯಾನ್‌ಕೇರ್ ಮಹಿಳೆಯರಿಗೆ ಆಸಕ್ತಿಯ ವಿಷಯದ ಕುರಿತು ಮಿತ್ರ ಕ್ಯಾನ್‌ಕೇರ್ ವೈದ್ಯಕೀಯ ಸಲಹಾ ಮಂಡಳಿಯ ಸದಸ್ಯೆ ಡಾ. ರಾಣಿ ಭಟ್ ಅವರೊಂದಿಗೆ ವಿಶೇಷ ಸಂವಾದಾತ್ಮಕ ಅಧಿವೇಶನದೊಂದಿಗೆ ತರುಣಿ ಮಿತ್ರ ಫೋರಮ್ ಅನ್ನು ಪ್ರಾರಂಭಿಸಿತು ಮತ್ತು.

ಮಿತ್ರ ಕ್ಯಾನ್‌ಕೇರ್ ಫೌಂಡೇಶನ್‌ನ ಸ್ವಯಂಸೇವಕರಾದ ಶ್ರೀಮತಿ ಸುಜಾತಾ ಸಾಹು ಅವರು ಅಧಿವೇಶನವನ್ನು ನಿರ್ವಹಿಸಿದರು.

ಆಕರ್ಷಕವಾದ ಪ್ರಶ್ನೋತ್ತರ ಅವಧಿಯೊಂದಿಗೆ ಅಧಿವೇಶನವು ಚೆನ್ನಾಗಿ ಮೆಚ್ಚುಗೆ ಪಡೆಯಿತು.

ಕೆಳಗಿನ ಪ್ಯಾರಾಗಳಲ್ಲಿ ನಾವು ಕಲಿಕೆಯ ಸಾರಾಂಶವನ್ನು ನೀಡಿದ್ದೇವೆ.

ಕಲಿಕೆಯ ಸಾರಾಂಶ

ಮಾಹಿತಿಯಲ್ಲಿರಿ, ಆರೋಗ್ಯವಾಗಿರಿ!

ಮಿತ್ರ ಕ್ಯಾನ್‌ಕೇರ್ ಫೌಂಡೇಶನ್‌ನ ಪರಿಚಯದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ರೋಟರಿ ಬೆಂಗಳೂರು ವೆಸ್ಟ್‌ನ ಇನ್ನರ್ ವೀಲ್ ಕ್ಲಬ್‌ನ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ವೆಂಕಟೇಶ್ ಅವರು ಉದ್ಘಾಟನಾ ಭಾಷಣದೊಂದಿಗೆ ತರುಣಿ ಮಿತ್ರ ವೇದಿಕೆಯನ್ನು ಪ್ರಾರಂಭಿಸಿದರು. ನಂತರ ರಾಣಿ ಭಟ್ ಅವರಿಂದ ಮಹಿಳೆ ಮತ್ತು ಸ್ವಾಸ್ಥ್ಯ ಎಂಬ ವಿಷಯದ ಕುರಿತು ಮಾಸಿಕ ತಿಳಿವಳಿಕೆ ಅಧಿವೇಶನ ನಡೆಯಿತು.

Dr ರಾಣಿ ಅವರು ಪ್ರಾರಂಭದಲ್ಲಿ,  ಮಹಿಳೆಯರಲ್ಲಿ,  ಮುಟ್ಟಿನದು ಬಿಟ್ಟು, ಮೂರು (ವಯಸ್ಸಿನ) ಹಂತಗಳಲ್ಲಿ, ಅಸಹಜ ರಕ್ತಸ್ರಾವದ ಬಗ್ಗೆ , ಶೀಘ್ರವಾಗಿ ವಿವರ ನೀಡಿದರು ಮತ್ತು ಇವುಗಳ ಕಡೆ ತುರ್ತಾಗಿ ಗಮನ ನೀಡಬೇಕೆಂದರು.

ಪ್ರೌಡಾವಸ್ಥೆಯ ಮೊದಲು: ರಕ್ತಸ್ರಾವದ ಕಾರಣ ಈ ಕೆಳಗೆ ಇರುವ ಯಾವುದಾದರೂ

  • ಗಾಯ
  • ಲೈಂಗಿಕ ದುರುಪಯೋಗ
  • ರಕ್ತ ಹೆಪ್ಪುಗಟ್ಟುವಿಕೆ
  • ಆರಂಭಿಕ ಪ್ರೌಢಾವಸ್ಥೆ
  • ತೀವ್ರ ಯೋನಿಯ ಕಿರಿಕಿರಿ

ಸಂತಾನೋತ್ಪತ್ತಿ  ವಯಸ್ಸು : ರಕ್ತಸ್ರಾವದ ಕಾರಣ ಈ ಕೆಳಗೆ ಇರುವ ಯಾವುದಾದರೂ

  • ಹಾರ್ಮೋನ್ ಅಸಮತೋಲನ
  • ಅಂಡಾಶಯ ( ಯುಟೆರೈನ್ ) ಫೈಬ್ರಾಯ್ಡ್
  • ಎಂಡೊಮೆಟ್ರಿಯೋಸಿಸ್
  • ಗರ್ಭನಿರೋಧಕ ಮಾತ್ರೆಗಳು
  • ಕಾಪರ್ ಟಿ etc.

ಋತುಬಂಧ ( ಮೆನೋಪಾಸ್) ಆದಮೇಲೆ: ರಕ್ತಸ್ರಾವದ ಕಾರಣ ಈ ಕೆಳಗೆ ಇರುವ ಯಾವುದಾದರೂ

  • ಹಾರ್ಮೋನ್ ಬದಲಿ ಥೆರಪಿ
  • ಕ್ಯಾನ್ಸರ್
  • ಒಣಗಿದ ಯೋನಿ
  • ದುರ್ಬಲಗೊಂಡ ಪೆಲ್ವಿಕ್ ಫ್ಲೋರ್ (ಪೆಲ್ವಿಕ್ ತಳದ) ಸ್ನಾಯಾಗಳಿಂದ ಅಂಡಾಶಯದ ಪ್ರೋಲಾಪ್ಸ.

ಕ್ಯಾನ್ಸರ್ ಚಿಕಿತ್ಸೆಯಿಂದ ಅಥವಾ ಋತುಬಂಧದಿಂದ ಯೋನಿಯು ಒಣಗಿ, ಅದರಿಂದ ಹಾನಿಯಾಗಿ, ಯೋನಿಯ ಕಿರಿಕಿರಿ ಆಗಬಹುದು.

ಡಾಕ್ಟರ್ ಅನ್ನು ಯಾವಾಗ ನೋಡಬೇಕು:

  • ಅವಧಿ ೨೧ ದಿನಗಳಿಂದ ಕಡಿಮೆ ಅಥವಾ ೪೫ ದಿನಗಳಿಂದ ಅಧಿಕವಾಗಿದ್ದು
  • ಹೊಟ್ಟೆ ಅಥವಾ ಪೆಲ್ವಿಕ್ ನೋವು, ಅವಧಿ ಸಮಯದಲ್ಲಿ
  • ತೀವ್ರ ರಕ್ತಸ್ರಾವ – ಪ್ರತಿ ಘಂಟೆಗೆ ಒಂದು ಪ್ಯಾಡ್/ ತಾಂಪಾನ್ ಗಿಂತ ಜಾಸ್ತಿ
  • ಬಿಳಿ ವಿಸರ್ಜನೆ ಸಾಮಾನ್ಯ ಅಂಡೋತ್ಪತ್ತಿ  (ಓವುಲೇಷನ್) ಸಮಯದಲ್ಲಿ; ಆದರೆ ಸೋಂಕು (ಇನ್ಫೆಕ್ಷನ್) ಇದ್ದಲ್ಲಿ ಅಸಹ್ಯ ವಾಸ ಒಂದುನೆಯುಳ್ಳ ವಿಸರ್ಜನೆ ಮತ್ತು ಕಿರಿಕಿರಿ ಆಗಬಹುದು; ಕ್ಯಾನ್ಸರ್ ಇರಬಹುದು

ಶುಷಿ ಮಾಡಿಕೊಳ್ಳವ ವಿಧಾನ – ಮುಂದೆಯಿಂದ ಹಿಂದಕ್ಕೆ, ಸೋಂಕು ತಪ್ಪಿಸಲು

ಮಹಿಳೆಯರಲ್ಲಿ ಸಾಮಾನ್ಯ (ಆರೋಗ್ಯದ) ತೊಂದರೆಗಳು:

  1. ಐರನ್ ( ಕಬ್ಬಿಣದ) ಕೊರತೆ /ಅಭಾವ
  2. ವಿಟಮಿನ್ ಡಿ ಕೊರತೆ/ ಅಭಾವ
  3. ಕ್ಯಾಲ್ಸಿಯಂ ನ ಅಭಾವ
  4. ಡಿಪ್ಪರೆಶನ್ ( ಅಪಸರ್ಪ)
  5. ಸಾಮಾನ್ಯ  ಆಯಾಸ/ ಸುಸ್ತು

ಕಬ್ಬಿಣದ ಕೊರತೆಯನ್ನು ತೆಗೆದುಕೊಳ್ಳುವ ಮೂಲಕ ಪರಿಹರಿಸಬಹುದು:

ಐರನ್ (ಕಬ್ಬಿಣ) ತುಂಬಿರುವ ಶಾಖಾಹಾರಿ ಆಹಾರಗಳು:

  • ಥೋಫು,ಸೋಯಾಬೀನ್, ಬೇಳೆಗಳು (ಲೆಂಟಿಲ್ಸ್,), ಹುರುಳಿ (ಬೀನ್ಸ್), ಬಟಾಣಿ (ಪೀಸ್), ಟೊಮೇಟೊ, ನಟ್ಸ್ (ಬಾದಾಮಿ, ವಾಲ್ನುಟ್, ಗೇರುಬೀಜ ಇತ್ಯಾದಿ), ಪ್ರೂನ್ ರಸ, ಅಣಬೆ (ಮಶ್ರೂಮ್), ಒಲಿವ್ಸ್, ಓಟ್ಸ್, ಕಿನೋವ ಧಾನ್ಯ, ಡಾರ್ಕ್ ಚಾಕೊಲೇಟ್, ಥೈಮ್, ಇತ್ಯಾದಿ.
  • ಮಾಂಸಾಹಾರಿ ಆಹಾರಗಳಲ್ಲಿ ಐರನ್ (ಕಬ್ಬಿಣ) – ಲಿವರ್, ಶೆಲ್ಫಿಷ್, ಟೂನಾ ಮೀನು ಇತ್ಯಾದಿ

ಶಾಖಾಹಾರಿ   ಆಹಾರದಿಂದ ಐರನ್(ಕಬ್ಬಿಣದ) ಹೀರುವಿಕೆಗೆ ವಿಟಮಿನ್ ಸಿ ಬಳೆಸಿರಿ ಮತ್ತು ಕಾಫಿ ಚಹಾ ತಪ್ಪಿಸಿ. ನೆನಸಿದ ನಟ್ಸ್ ಮತ್ತು ಬೀಜಗಳು, ಮೊಳಕೆ ಹಾಕಿರುವ ಧಾನ್ಯಗಳು ಕೂಡ ಹೀರುವಿಕೆಗೆ ಸಹಾಯಕರ.  ಅಡುಗೆಗೆ ಎರಕಹೊಯ್ದ ಕಬ್ಬಿಣದ ಪಾತ್ರೆಗಳನ್ನು ಉಪಯೋಗಿಸಬಹುದು.

ವಿಟಮಿನ್ ಅಭಾವ ( ದೇಹದಲ್ಲಿ)  ಆಯಾಸ, ಮೂಳೆನೋವು, ಡಿಪ್ಪರೆಶನ್ (ಅಪಸರ್ಪ), ಕೂದಲು ಉದುರುವಿಕೆಗೆ ಕಾರಣ. ಸಹಜವಾದ ವಿಟಮಿನ್ ಡಿ , ೧೧ ಘಂಟೆಯ ನಂತರದ ಸೂರ್ಯನ ಬೆಳಕಿನ ಒಡ್ಡುವಿಕೆಯಿಂದ ದೊರಕುತ್ತದೆ.

ವಿಟಮಿನ್ ಡಿ ಕೂಡಿದ ಆಹಾರ ಪದಾರ್ಥಗಳೆಂದರೆ – ಸಾಲ್ಮನ್ ಮೀನು, ಕಾಡ್ಲಿವರ್ ಆಯಿಲ್ ( ಎಣ್ಣೆ), ಓಯ್ಸ್ಟರ್, ಮೊಟ್ಟೆಯ ಹಳದಿ, ಅಣಬೆ (ಮಶ್ರೂಮ್), ವಿಟಮಿನ್ಯುಕ್ತ ಹಾಲು, ಮತ್ತು ತಾಜಾ ಹಣ್ಣಿನ ರಸ.

ಕ್ಯಾಲ್ಸಿಯಂನ ಅಭಾವದಿಂದ ಮರಗಟ್ಟುವಿಕೆ ( ನಂಬ್ನೆಸ್ ),ಆಯಾಸ, ಕ್ರಾಂಪ್ಡ್ ( ಜೊಂಪು), ಹಲ್ಲಿನ ಸವೆತ, ರಕ್ತದ ಹೆಪ್ಪಗಟ್ಟುವಿಕೆ, ಹೃದಯದ ತೊಂದರೆ ಇತ್ಯಾದಿ ಆಗಬಹುದು. ಚೀಸ್, ಮೊಸರು, ಹಾಲು, ಅಂಜೂರಗಳು, ಥೋಫು, ಬೀನ್ಸ್ , ಮಿಲ್ಲೆಟ್ಸ್, ಮೀನು, ಧಾನ್ಯಗಳು, ಕಿತ್ತಲೆ ರಸ ಇತ್ಯಾದಿ ಗಳಿಂದ ಕ್ಯಾಲ್ಸಿಯಂ ದೊರಕುತ್ತದೆ.

೪೫ ವರುಷ ಆದಮೇಲೆ, ಜಾಗರೂಕರಾಗಿ, ಕ್ಯಾಲ್ಸಿಯಂನ ಅವಶ್ಯಕತೆ ಹಾಲಿನಿಂದ ಅಲ್ಲದೆ ಔಷಧಿಗಳ ಮೂಲಕ ಪೂರೈಸಿಕೊಂಡು ಮೂಳೆಗಳ ಬಲ ವರ್ಧಿಸಿಕೊಳ್ಳಬೇಕು.

ಹಾರ್ಮೋನ್ ಬದಲಾವಣೆಗಳಿಂದ    ಡಿಪ್ಪರೆಶನ್ (ಅಪಸರ್ಪ) ಸಾಮಾನ್ಯ; ಪ್ರೊಜೆಸ್ಟರಾನ್ ಅವಧಿಯ ಮುಂಚಿತವಾಗಿ ಕಾರಣ. ಇದನ್ನು ಗುರುತಿಸಿ ಸೂಕ್ತ ಕ್ರಮ ತೆಗೆದುಕೊಳ್ಳಿರಿ.

ನಿದ್ರೆ ಸೇರಿ, ಆಹಾರದ ಮೂಲಕ   ಡಿಪ್ಪರೆಶನ್ (ಅಪಸರ್ಪ) ವನ್ನು ಎದುರಿಸಿರಿ – ಹಸಿರು ಬೀನ್ಸ್ , ವಾಲ್ನುಟ್ಸ್, ಆವಕಾಡೋ, ಬೆರೀಸ್ ( ಬೀಜ ಹಣ್ಣುಗಳು), ಅಣಬೆ (ಮಶ್ರೂಮ್), ಈರುಳ್ಳಿ, ಟೊಮಾಟೊ, ಬೀಜಗಳು, ಆ್ಯಪಲ್, ಟರ್ಕಿ ಕೋಳಿ, ಟೂನಾ ಮೀನು, ಫ್ಯಾಟಿ ಮೀನು, ಹಸಿರು ಚಹಾ, ಕ್ಯಾಮ್ಮೋಮಿಲ್ ಚಹಾ, ಪೂರ್ಣ ಧಾನ್ಯ, ಅರಿಶಿನ, ಡಾರ್ಕ್ ಚಾಕಲೇಟ್ (೮೦ ಪ್ರತಿಶತ)

ಲೈಂಗಿಕ ಅಪಸಾಮಾನ್ಯ ಕ್ರಿಯೆ

ಸಂಕೀರ್ಣ ಮತ್ತು ಬಹು ಕ್ರಿಯಾತ್ಮಕವಾದ ಇದು ಜೀವನದ ಗುಣಮಟ್ಟದ ಮೇಲೆ ಗಮನಾರ್ಹ ಪ್ರಭಾವ, ವಿಶೇಷವಾಗಿ ಕ್ಯಾನ್ಸರ್ ಆದಮೇಲೆ, ಬೀರುತ್ತದೆ. ದುರದೃಷ್ಟವಶಾತ್  ಪುರುಷರ ಚಿಕಿತ್ಸೆಗೆ ೨೬ ತರಹದ ಔಷದಿಗಳಿದ್ದು ಮಹಿಳೆಯರಿಗೆ ಒಂದೂ ಇಲ್ಲ ಯಾಕೆಂದರೆ ಮಹಿಳೆಯರು ಅದರ ( ಖಾಯಿಲೆಯ) ಬಗ್ಗೆ ಮಾತನಾಡುವುದಿಲ್ಲ.

ಕೆಲವು ಕ್ರಮಗಳು :

  • ಹೊಟ್ಟೆಯ ಬೊಜ್ಜು ಇಳಿಸುವುದು
  • ತಂಬಾಕು ನಿಷೇಧ
  • ಜೊತೆಗಾರ ತಂಬಾಕು ಸೇವಿಸಬಾರದು
  • ಕಾಮನಬಿಲ್ಲನ್ನು ತಿನ್ನು ( ಕಾಮನ ಬಿಲ್ಲಿನಂತೆ ವಿವಿಧ ಬಣ್ಣಗಳ ತರಕಾರಿ ಹಣ್ಣುಗಳನ್ನು)
  • ಸಣ್ಣ ಸಣ್ಣ ತುತ್ತುಗಳೊಂದಿಗೆ ನಿಧಾನವಾಗಿ ಸ್ವಾದವನ್ನು ಹೀರುತ್ತ ಊಟ ಮಾಡಿರಿ. ಸಲೈವದ ಕಾಣಿಕೆ ಅಥಿ ಮುಖ್ಯ ಮತ್ತು ಚೂಯಿಂಗ್ ತೂಕ ಕಡಿಮೆ ಮಾಡಲು ಸಹಾಯಕರ
  • ಚಿಕ್ಕ ಪ್ರಮಾಣದ ಊಟ ಸೇವಿಸಿರಿ
  • ಮದ್ಯಪಾನ ಮಿತಿಯಾಗಿ – ಸ್ತನದ ಕ್ಯಾನ್ಸರ್ ಕಡೆ ತೋರಿಸುತ್ತದೆ
  • ಮೂವತ್ತು (೩೦) ನಿಮಿಷಗಳ ವ್ಯಾಯಾಮ ಮೂಳೆಗಳಿಗೆ ಮತ್ತು ಹಾರ್ಮೋನ್ ಗೆ ಒಳ್ಳೆಯದು

ಮಹಿಳೆಯರು ಈ ಕೆಳಗಿನ ನಾಲ್ಕು ವಿಷಯಗಳನ್ನು ಜ್ಞಾಪಿಸಿಕೊಳ್ಳಬೇಕು:

  • ಪುಷ್ಟಿಕರ ಆಹಾರ
  • ವ್ಯಾಯಾಮ
  • ಒತ್ತಡವನ್ನು ಕಡಿಮೆ ಮಾಡುವುದು
  • ನೀರು ಕುಡಿಯುವುದು

ಪ್ರಶ್ನೋತ್ತರ

Q- ಪಾಪ್ ಸ್ಮಿಯರ್ ಪರೀಕ್ಷೆ ಆಗಾಗ್ಗೆ ಯಾವಾಗ ಮಾಡಿಸಬೇಕು?

ಪ್ರತಿಯೊಬ್ಬ ಲೈಂಗಿಕ ಸಕ್ರಿಯ ಮಹಿಳೆ  ಪಾಪ್ ಸ್ಮಿಯರ್ ಪರೀಕ್ಷೆ  ಪ್ರತಿ ೩-೫ ವರುಷಕ್ಕೊಮ್ಮೆ, ೬೫ ವರುಷದ ವರೆಗೂ ಮಾಡಿಸಬೇಕು. ಆದು ಮಮ್ಮೋಗ್ರಮ್ ಗಿಂತ ಉತ್ತಮ.

Q- ಹೆಚ್. ಪಿ. ವಿ. ಲಸಿಕೆ ( ವ್ಯಾಕ್ಸೀನ್)  ಹೇಗೆ ಸಹಾಯಕರ? ಆದು ಹುಡುಗ ಹುಡುಗಿ ಇಬ್ಬರಿಗೂ?

ಹೆಚ್. ಪಿ. ವಿ. ಲಸಿಕೆ ( ವ್ಯಾಕ್ಸೀನ್) ಹುಡುಗ ಹುಡುಗಿ ಇಬ್ಬರಿಗೂ  ಕ್ಯಾನ್ಸರ್ ತಡೆಗಟ್ಟುತ್ತದೆ. ೧೧ ರಿಂದ ೧೫ ವರುಷದವರಿಗೆ ೨ ಡೋಸ್( ಬಾರಿ); ೧೫ ರಿಂದ ೩೦ ವರುಶದವರಿಗೆ ೩ ಡೋಸ್ (ಬಾರಿ); ಗರಿಷ್ಠ ೪೫ ವರುಷದವರಿಗೆ ಡಾಕ್ಟರ್ ಸಲಹೆ ಮೇರೆಗೆ. 

ಅದು ೮೦- ೮೫ ಪ್ರತಿಶತ ಯಶಸ್ವಿ, ಆದರೆ ವಯಸ್ಸಾದವರಿಗೆ ಅಷ್ಟು ಇಲ್ಲ. 

ಆದರೆ, ಪಾಪ್ ಸ್ಮಿಯರ್ ಪರೀಕ್ಷೆ  ಮತ್ತು ಮಮ್ಮೋಗ್ರಮ್ ಮಹಿಳೆಯರಿಗೆ ಕಡ್ಡಾಯ.

Q – ಯಾವ ಯಾವ ಆರೋಗ್ಯ ಚೆಕಪ್ ಶಿಫಾರಸು ಮಾಡಲಾಗಿದೆ ?

೪೦ ವಯಸ್ಸಾದ ಬಳಿಕ, ನಿಯಮಿತ ಆರೋಗ್ಯ ಚೆಕಪ್ ಅಗತ್ಯ. ( ಕಾರ್ಡಿಯೋ, ವಿಟಮಿನ್ ಡಿ, ಬಿ ೧೨, ಇತ್ಯಾದಿ). ಶೀಘ್ರ ಋತುಬಂಧ ( ಮೆನೋಪಾಸ್) , ಸುಮಾರು ೩೮ ವಯಸ್ಸಿನ ಹತ್ತಿರ, ಮೂಳೆ ಮತ್ತು ಹೃದಯಕ್ಕೆ ಪರಿಣಾಮ ಇರುತ್ತದೆ. ಮಹಿಳೆಯರಿಗೆ ಹೃದಯಾಘಾತದ ಅಪಾಯ ಕಡಿಮೆ; ೪೦ ವಯಸ್ಸಿನ ನಂತರ ಸರಿ ಸಮಾನ ( ಪುರುಷರೊಂದಿಗೆ) . ಆದ್ದರಿಂದ ಆರೋಗ್ಯಕರ ಸಮತೋಲನದ ಆರೋಗ್ಯ ಕ್ರಮ (ಡಯೆಟ್) , ವ್ಯಾಯಾಮದೊಂದಿಗೆ ಶಿಫಾರಸು ಮಾಡಿದೆ.

೫೦ ವಯಸ್ಸಾದ ಬಳಿಕ, ಅಥವಾ ಕ್ಯಾನ್ಸರ್ ಟ್ರೀಟ್ಮೆಂಟ್ ಆದ ಒಂದು ವರುಷದ ನಂತರ,  ಬೋನ್ ಡೆನ್ಸಿಟಿ ಟೆಸ್ಟ್ ( ಮೂಳೆ ಪರೀಕ್ಷೆ)  ಮಾಡಿಸಬಹುದು.

ಮನೆಯಲ್ಲಿ ತಯಾರಿಸಿದ ಮೊಸರಿನಲ್ಲಿ ಇರುವ ಲಾಕ್ಟೋ ಬಾಸಿಲ್ಲುಸ್ ಸೇವಿಸಬಹುದು. ಟೊಮಾಟೊ ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ.

Q – ಯುವತಿಯರಿಗೆ ಯಾವ ಪರೀಕ್ಷೆಗಳನ್ನು ಶಿಫಾರಸು ಮಾಡುತ್ತೀರಿ, ಕ್ಯಾನ್ಸರ್ ಬಗ್ಗೆ ?

ಯುವತಿಯರು  ಮಾಮ್ಮೋಗ್ರಮ್ ಬದಲು ಅಲ್ಟ್ರಾಸೌಂಡ್ ಪರೀಕ್ಷೆ ತೆಗೆದು ಕೊಳ್ಳಬಹುದು, ಆದರೆ ಸಾಮಾನ್ಯ ಪ್ರಕರಣಗಳಲ್ಲಿ ಅಗತ್ಯವಿಲ್ಲ.